ಜಗವೇ ನಶ್ವರ ಕಪಟ ಮೋಸವಂತೆ,
ಎಲ್ಲೆಲ್ಲೂ ಬರೀ ದುರ್ಜನರ ಸಹವಾಸ,ನಮ್ಮ ಮೇಘರಾಜನದೂ ಅದೇ ಕಥೆ...
ನೀರಾ ಕುಡುಕ ರವಿಯ ಸೇರಿ
ದಾಸನಾಗಿ ಬಿಟ್ಟನ...
ಮನೆ ಮಾನ ತೆಗೆದನ...
ಇವನಿಗೆ ಹೇಳುವವರಿಲ್ಲ,
ಚಂದ್ರ ರಾತ್ರಿ ಸಂಚಾರಿ,
ಪರ್ವತರಾಜ ಮುದುಕನಾದ,
ವಾಯುವಿಗೆ ನಿಶ್ಯಕ್ತಿ...
ಪ್ರಕೃತಿಯ ಮಾತನ್ನು ಕೇಳಲ್ಲ
ಹಾಗೂ ಹೀಗೂ ಧರಿತ್ರಿ ಬೀದಿಗೆ ಬಂದಳು...!!!
ಭೂಮಿ ಕುಡುಕನ ಮನೆವಾಯಿತು.