Wednesday, October 18, 2017

ಒಂದು ತೊಟ್ಟೆಯ ಕತೆ

ನನ್ನ ಮಾವ ತಮ್ಮ ಜಾಗದ  ವಲಚ್ಚಿಲ್ನ ಒಳಗೆ ಮರ ಗೆಣಸುಗಳನ್ನು ತಿಂದು ಮುಗಿಸುತಿದ್ದ ಹೆಗ್ಗಣಗಳನ್ನೂ ಹಿಡಿಯಲು ಅಲಲ್ಲಿ ಅಡೆಂಚಿಲ್  ಇಡುತ್ತಿದ್ದರು. ಅದಕ್ಕಾಗಿ ಅಕ್ಕಿಯೋ, ಗೋಧಿಯ ಕಾಳುಗಳನ್ನೋ ಪುಟ್ಟ ಚಿಪ್ಪಿಯಲ್ಲಿಟ್ಟು ಒಂದು  ತೊಟ್ಟೆಯಲ್ಲಿ ಕಟ್ಟಿ ಜೋಪಾನ ಮಾಡುತಿದ್ದರು . ಯಾಕೆಂದರೆ ಮುಂಜಾವಿನ ಮಂಜಿನ ಹನಿಗಳಿಗೆ ಗೋಧಿ ನಾನಿ ಬಿಸಾಡುವುದು ಬೇಡವೆಂದು, ತರಕಾರಿ ಬೆಳೆಸಿದ ಮಜಲಿನಲ್ಲಿ  ತರಕಾರಿ  ನಿನೆಗಳನ್ನು  ತಿನ್ನಲು ಬರುತಿದ್ದ ಹಕ್ಕಿಗಳ ಉಪಟಳ ತಡೆಯಲು ಮಾವ  ಮುಡ್ಕನೆ ಇಟ್ಟು  ಮುಡ್ಕನೆಗೆ ಕಟ್ಟುವ  ಪಕ್ಕಿಕೇನೆ ಹಣ್ಣಿನ  ಅರ್ಧದವರೆಗೆ ಮಾತ್ರ  ಲಕೋಟೆ ಕಟ್ಟುತ್ತಿದ್ದರು, ಎಲ್ಲ ಕೇನೆಯನ್ನು ಒಂದೇ ಹಕ್ಕಿ ತಿಂದು ತೇಗುವುದು ಬೇಡವೆಂದು ಮಾವನು ಕುರೆ ಕಟ್ಟಿ ಉಳಿಸುವುದು. ಹಕ್ಕಿಗಳ ಹಿಂಡುಗಳನ್ನು ಬೆದರಿಸಲು ಅಲ್ಲಲ್ಲಿ ಬೆದರು ಬೊಂಬೆಯ ಬದಲಾಗಿ ಮಿಂಕೋಟೆ ತೊಟ್ಟೆಗಳನ್ನು, ಬೆದರು ತೊಟ್ಟೆಗಳನ್ನು ತೂಗು ಹಾಕುತಿದ್ದರು. ಇನ್ನು ಹಲಸಿನ ಸೀಸನ್ನಲ್ಲಿ ಹಪ್ಪಳ ಒತ್ತಲು ಗೋಲಾಕಾರದ ಪಾರದರ್ಶಕ   ತೊಟ್ಟೆಯನ್ನೇ ಬಳಸುವುದುಇದೆಲ್ಲ ನಮ್ಮ ಮಾವನ ತೊಟ್ಟೆ ಕತೆ.

ಮತ್ತೆ ನಮ್ಮ ಹಳೆ ಟೇಪ್ ರೆಕಾರ್ಡ್ನನ ಕ್ಯಾಸೆಟಿನ  ರೀಲ್, ರೀಲಿನ ಎರಡು ಕಡೆ ಕಲ್ಲುಗಳನ್ನೂ ಕಟ್ಟಿ ರೊಯ್ಯೆಂದು ಮೇಲೆ ಎಸೆದು ಎರಡು ಮರಗಳಿಗೆ ಸಂದು ಹಾಕುವಂತೆ ಮಾಡಿ, ಅದು ಮುಸ್ಸಂಜೆಯ ಬಾಡಿದ ಬೆಳಕಿಗೆ  ಮಿನುಗುವ ಚಂದ ನೋಡುವುದು, ವೇಗವಾಗಿ ಬೀಸುವ ಗಾಳಿಗೆ ರೀಲ್  ಸುಯ್ಯೇ ಸುಯ್ಯಿ ಎಂದು ಬುಸುಗುಟ್ಟುವ ಹಾವಿನ ಶಬ್ದಉಂಟಾದಾಗ ಅಮ್ಮನಿಂದ ಬೈಗುಳ ಕೇಳಿಸುವುದುಕಾಗದ ಉರುಂಡೆ ಮಾಡಿ, ಸಣ್ಣ ಉರುಂಟು ಕಲ್ಲುನ್ನು ತುಂಬಿ ಹೊರಗೆ ಲಕೋಟೆ ಕಟ್ಟಿ, ಚೆಂಡಟಾ ಆಡಿದ್ದು  ಇದು ಮೊದ ಮೊದಲು ತೊಟ್ಟೆ ಬಳಸಿ  ಆಡಿದ ಆಟಗಳು. ಇವು ನಾನು  ಮೊದಲು ಕಂಡ ತೊಟ್ಟೆಯ ವಿಷ್ಯ ಹಾಗೂ ತೊಟ್ಟೆಯ ಆಟಗಳು ... ಇನ್ನೂ ಇತ್ತೀಚಿನ ವರೆಗೆ ಮದುವೆಗಳಲ್ಲಿ ಮಿಂಕೋಟೆ ಲಕೋಟೆಗಳ  ಅಲಂಕಾರ ಮಾಡುತ್ತಿದ್ದರೆ, ದಿಕ್ಕೆಲಿನ ಮೂಲೆಯಲ್ಲಿ ಅಡಿಕೆ ಹಾಲೆಯ ಮೂಡೆಯಲ್ಲಿ   ಕಟ್ಟಿಡುತಿದ್ದ ಲುಂಗೆಲ್  ಮೀನನ್ನು ಕಾಗದದಲ್ಲಿ ಕಟ್ಟಿ ಲಕೋಟೆಯಲ್ಲೇ ಕಟ್ಟುತ್ತಿದದ್ದು ನನ್ನಮ್ಮ , ನಮ್ಮಚಿಕ್ಕಪ್ಪ ತೋಡಿನ ಏಡಿ ಹಿಡಿಯಲು ಮನೆಗೆ ತಂದ ಮೀನಿನ ಪೊಟ್ಟೆಯನ್ನು ತೊಟ್ಟೆಯಲ್ಲಿ ಕಟ್ಟಿ ತೋಡಿನ ಸವಾಕಾಶ ಜಾಗದಲ್ಲಿ ಅಲ್ಲಲ್ಲಿ ಒಂದು ಸಾದ ಗಾತ್ರದ ಕಲ್ಲುಗಳ ಕೆಳಗಿಟ್ಟು ಒಂದೆರಡು ಗಂಟೆಗಳ ನಂತರ ಡೆಂಜಿ ಬೋಂಟೆಗೆ ಹೋಗುವುದು ಆಗಾಗ ನಡೆಯುತ್ತದೆ.

ಆಗಿಂದಾಗ್ಗೆ  ತೊಟ್ಟೆ ಎಂದ ಕೂಡಲೇ ನೆಂಪಾಗುವುದು  ತೊಟ್ಟೆ ಸಾರಾಯಿಇದನ್ನು ಕರಾವಳಿಯಲ್ಲಿ ತೊಟ್ಟೆ ಅಂತಲೇ ನಾಮ ವಿಶೇಷಣದಿಂದ ಹೆಸರಿಸಲಾಗಿತ್ತುನಮ್ಮ ಅಜ್ಜ ಬೇಗನೆ ಗೊಟಕ್  ಅಂದದ್ದು ತೊಟ್ಟೆಯ ಹಠಾತ್  ಮುಷ್ಕರದ ಬಂದ್ನಿಂದಾಗಿ ಎಂಬುದು ಸತ್ಯ. ಹೌದು ಸುಮಾರು ೮೫ ವರ್ಷದ ನನ್ನಜ್ಜ ಸೂರ್ಯನ ಬೆಳಕನ್ನೇ ಗಂಟೆ ಮಾಡಿ ಸಂಜೆ ಆಗುವಾಗ ಗಡಂಗಿನ ಎದುರು ದಿನದ ಹಾಜರಿ  ಹಾಕುತ್ತಿದ್ದರು. ಯಾವಾಗಲು ಬಾಗಿ ನಡೆಯುತ್ತಿದ್ದ ನಮ್ಮಜ್ಜನೊಳಗೆ  ತೊಟ್ಟೆ  ಸೇರಿದರೆ ಸರಿ ಸುಮಾರು  ಸರ್ತವಾಗಿಯೇ ಕೈ ಹಿಂದೆ ಕಟ್ಟಿಕೊಂಡು  ನಡೆಯುತ್ತಿದ್ದರು. ಹೀಗೆ ನನ್ನಜ್ಜನಂತೆ ನನ್ನೂರ ಹಲವು ತೊಟ್ಟೆ ಪ್ರಿಯರು ಬಾರದ ಊರಿಗೆ ಕಳೆದು ಹೋಗಿದ್ದಾರೆ.

ತಮಗೂ ಗೊತ್ತಿರಬಹುದು ಪ್ಲಾಸ್ಟಿಕ್ ಸುಟ್ಟರೆ ಅದರಿಂದಾಗಿ ಹಲವು  ಅನಿಲಗಳು  ಉತ್ಪತ್ತಿಯಾಗುತ್ತವೆ ಎಂದು, ನಮ್ಮ ಸಮಾರಂಭಗಳಲ್ಲಿ ಅಡುಗೆ ಭಟ್ರು ಪಪ್ಪಡ ಕಾಯಿಸಿ ಅದರ ಹೊರಕವಚ ಪ್ಲಾಸ್ಟಿಕ್ ತೊಟ್ಟೆಯನ್ನು ಒಲೆಗೆ ಹಾಕುತ್ತಾರಲ್ವಾ, ಇಲ್ಲಿ ಪಪ್ಪಡಕ್ಕೆ ಹಾಕಿದ ಉಪ್ಪಿನಂಶ (Chlorine Compound) ಪ್ಲಾಸ್ಟಿಕ್ ನೊಂದಿಗೆ ವರ್ತಿಸಿ ಅಡುಗೆಮನೆಯಲ್ಲೇ ಡಯಾಕ್ಸಿನ್  ಅನಿಲ ತಯಾರಾಗುತ್ತದೆ ಅನಿಲವನ್ನು ಅಮೇರಿಕ ಸೋತು ಹೋದ  ಏಕೈಕ  ಯುದ್ಧ  ವಿಯೆಟ್ನಾಂ ಯುದ್ಧ  1961 - 1971ರಲ್ಲಿ ಬಳಸಿತ್ತುಇದರಿಂದಾಗಿ ನೂರಾರು ಎಕರೆ ಸಸ್ಯಜನ್ಯ ನಾಶವಾಗಿತ್ತುಬಗೆಬಗೆಯ ಕಾಯಿಲೆಗಳಿಗೆ ನಾಂದಿಯಾಗಿತ್ತಂತೆಆವಾಗಿನ ಕಾಲದಲ್ಲೇ ವಿಷ ಅನಿಲವಾಗಿವಾಗಿ ಬಳಸಿದ್ದರು. ಇದೇ ಅನಿಲ ನಾವು ತೋಟಕ್ಕೆ ನೀರು ಸರಬರಾಜಿಗೆ ಬಳಸುವ PVC ಕೊಳವೆಗಳನ್ನು ಉರಿಸಿದ್ರು ಉತ್ಪತ್ತಿಯಾಗುತ್ತದೆಮತ್ತೆ ತಾವು ನೋಡಿರಬಹುದು ಜಾತ್ರೆಯಂದು ಬಿಡುವ ಕದಿನ, ಅಲ್ಲಿ ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಪಟಾಕಿಗಳಲ್ಲಿ ಬಳಸುವ ನೀಲಿಗಾಗಿ ತಾಮ್ರ, ಹಸಿರಿಗಾಗಿ ಬೇರಿಯಂ, ಕೆಂಪಿಗಾಗಿ ಕ್ರೋಮಿಯಂ ಬಳಸುತ್ತಾರೆನಾವು ದಿನ ಬಳಸುವ ತೆಳು ತೊಟ್ಟೆ, ಅದರಲ್ಲಿ ತರುವ ಮೊಸರು, ತಿಂಡಿ, ಸಾಂಬಾರು, ತರಕಾರಿಗಳ ಮೂಲಕ ದೇಹವನ್ನು ಸುಲಭವಾಗಿ ಸೇರಿಕೊಳ್ಳುತ್ತದೆ. ಇವೆಲ್ಲದುದರಿಂದಾಗಿ   ಪ್ಲಾಸ್ಟಿಕ್ ಇಂದು ನಮ್ಮ ಜೀವನದ ಭಾಗವಾಗಿರುವುದು ಆಮಿಷವಂತೂ ಅಲ್ಲಅದು ವಿಷವೇ.


                                           


ಆದುದರಿಂದ ಕಳಕಳಿ ಇಷ್ಟೇ "ಪ್ರಕೃತಿ ಮಾತೆಯು  ನಮ್ಮ ಮಾರ್ಗದರ್ಶಕಿ, ನಮ್ಮ ಶುಶ್ರೂಷೆ ಮಾಡುವ ದಾದಿ ಹಾಗೂ ನಮ್ಮ ಸೃಷ್ಟಿಗೂ ಕಾರಣಳು" ಎಂಬ ಆಂಗ್ಲ ಕವಿ ವರ್ಡ್ಸವರ್ತನ  ಮಾತನ್ನು ಅನುಮೋದಿಸಿ, ವಿಷ್ಣು ಪತ್ನಿ ಎಂದು ಆರಾಧಿಸುವ ಭೂಮಿ ತಾಯಿಗೆ, ಶುದ್ಧ ಆಮ್ಲಜನಕ ನೀಡುವ ಪರಿಸರಕ್ಕೆ ಪ್ಲಾಸ್ಟಿಕಿನ ಕೊಡುಗೆಯನ್ನು ಕಮ್ಮಿ ಮಾಡೋಣಬದಲಾಗಿ ಅಪ್ಪನ ಜೋಂಬ್ಲಸ್ ಪ್ಯಾಂಟಿನ ಕಾಲು ಕತ್ತರಿಸಿ ಒಂದು ಕಡೆ ಹೊಲಿದು ಮಗದೊಂದು ಕಡೆ ಲಾಡಿ ಸಿಕ್ಕಿಸಿದರೆ ನಮ್ಮ ಕೈಚೀಲ ಸಿದ್ಧವಾಗುತ್ತದೆಸ್ವಲ್ಪ ಅಂತರ್ಮುಖಿಗಳಾಗಿ ಜಿಜ್ಞಾಸೆ ಮಾಡಿ ತೊಟ್ಟೆಗೆ ವಿದಾಯ ಹೇಳೋಣ, ಸಂಗೀಸು, ಬಟ್ಟೆ ಚೀಲಗಳನ್ನು ಬಳಸೋಣ, ನಾವು ತೊಟ್ಟೆಗಳ ದಾಸರಾಗದಿರೋಣ ಏನಂತೀರಿ... !!!!

Thursday, August 3, 2017

ಗಡ್ಡದ ವಿಷ್ಯ

ಹೌದು ಇದು  ಗಡ್ಡದ ವಿಷ್ಯ,  ಹರೆಯಕ್ಕೆ ಬಂದಾಗ ಸಹಜವಾಗಿ ಫಲವತ್ತಾದ ಮೊಗದಲ್ಲಿ ಹುಲುಸಾಗಿ ಬೆಳೆಯುವ ಹುಲ್ಲುಗಳೆಂಬ   ಕೂದಲಿಗೆ ಅದೇನೋ ಪ್ರಚಾರ ಪ್ರಿಯತೆ ಗೊತ್ತಿಲ್ಲ, ಪ್ರತಿ ದಿನ ಗಡ್ಡ ತೆಗೆದರೆ ರಸಿಕನಾದರೆ, ತೆಗೆಯದೆ ಇದ್ದರೆ ಸನ್ಯಾಸಿ. ಹಲವರು ಇದರ ಬಗೆಗೆ ನಯವಾಗಿ ಪ್ರತಿಭಟಿಸುವವರೇ...ಇಲ್ಲಿ ನನ್ನ ದೇಹಕ್ಕೆ ಕಂತುವುದಲ್ಲ ಹಲವರ ಕಣ್ಣು ಗಳಿಗೆ ಚುಚ್ಚುವುದು, ಸಾಮಾಜಿಕ ನೆಲೆಯಲ್ಲಿ ಪ್ರಮುಖವಾದ   ಗಡ್ಡ,  ಸಭ್ಯ, ಸಂಸ್ಕಾರವೆನ್ನುವ ಸಮಾಜದಲ್ಲಿ ಕುಹಕವಾಗಿಯೇ ಆಡಿಕೊಳ್ಳುತ್ತಾರೆ

ತನ್ನಷ್ಟಕ್ಕೆ ಬೆಳೆದ ಗಡ್ಡದ  ಬಗೆಗೆ ನಾನು ಆಲೋಚಿಸಿದ್ದೇ ಕಡಿಮೆ. ಯಾವುದಾದರೂ ಸಮಾರಂಭಕ್ಕೋ, ಗಮ್ಮತಿಗೆ, ಯಾರದೋ ಸಮ್ಮಾನಕ್ಕೋ ಹೋದಾಗ ಪರಿಚಯವಿಲ್ಲದ ಮುಖಗಳು  ಕೇಳುವುದು ಯಾರಾತ  ಗಡ್ಡದ ಹುಡುಗ? ಎಂದು ಅದೆಷ್ಟೋ ಸಲ ಮಾತಾನಾಡಿಸಿದ್ದು ಇದೆ, ಮನೆ ಎಲ್ಲಿ ಯಾರ ಮಗಏನು ಓದುವುದುಏನು ಉದ್ಯೋಗ ಎಂದು ಜನಗಣತಿಯ ಟೀಚರ್  ಕೇಳುವಂತೆ ಸಾಲು ಸಾಲು ಪ್ರಶ್ನೆಗಳ ಮೆರವಣಿಗೆಯು ಅನುಭವವಾದದಿದೆ , ಸಹಜವಾಗಿ ಬೆಳೆದ ಗಡ್ಡದ ಬಗೆಗೆ, ಗಡ್ಡದಲ್ಲೇ ಪ್ರಶ್ನಿಸಬೇಕೇ ? ಹೊರತು ನನ್ನನೇಕೆ ಅಪರಾಧಿ ಮಾಡುತ್ತಾರೆ ಎಂದು ಆಗಾಗ ಮನಸಲ್ಲೇ ಪ್ರಶ್ನಿಸಿದ್ದು ಇದೆ.  ಮತ್ತೊಂದು ವ್ಯತಿರಿಕ್ತ ಅಂದರೆ  ನಮ್ಮ ಮನೆಯಲ್ಲಿ ಗಡ್ಡ ಬಿಡುವುದಕ್ಕೆ, ತೆಗೆಯುವುದ್ದಕ್ಕೆ  ಚಕ್ಕಾರವಿಲ್ಲದಿದ್ದರೂ, ಊರಿನವರಿಗೆ, ಅತ್ತಿಗೆಯಂದಿರಿಗೆ, ಸಂಬಂಧಿಗಳಿಗೆ, ಸೋದರ ಅತ್ತೆಯಂದಿರಿಗೆ, ಶಾಲಾ ಟೀಚರ್ಗೆನಮ್ಮ ಕಾಲೇಜು ಪ್ರಾಂಶುಪಾಲರಿಗೆ,  ಕಡೆಗೆ ದಾರಿ ಹೋಕರಿಗೂ  ಗಡ್ಡ ಚರ್ಚೆಯ ವಿಸ್ಯವೇ, ನಿನಗೆ ಗಡ್ಡ ಚಂದ ಕಾಣೋದಿಲ್ಲ, ನಿನ್ನದು ಕೋಲು ಮುಖ ಹಾಗಾಗಿ ಗಡ್ಡ ಇಲ್ಲದಿದ್ರೆ ಚಂದ ಬ್ಯಾರಿ ಅಬೂಬಕರೇ ಮಗನ  ಹಾಗೆ ಕಾಣ್ತಿಯಾ, ವಿಶೇಷ ಕಾರ್ಯಕ್ರಮಕ್ಕೆ ಹೋದರೆ ಮುಕ್ರಿ  ಬಂದ ನೋಡಿ ಕೋಳಿ ಕೊಡಿ ಎಂದು ಕೂಹಕವಾಡಿದ್ದು  ಇದೆ, ಮಗಳಿರುವ ದೂರದಿಂದ ಮಾವ ಆಗುವವರೊಬ್ಬರು  ಗಡ್ಡ ಇಡುವುದು ನಮ್ಮ ಸಂಸ್ಕಾರ ಅಲ್ಲ ಆಲ್ವಾ? ಎಂದು  ತನ್ನ ಮಗಳಿಗೆ ಈತ ವರನಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮುನ್ಸೂಚನೆ ನೀಡಿದ್ದು ಇದೆ. ನನ್ನೂರ ಬ್ಯಾರಿಗಳ ಮೊಬೈಲ್  ಅಂಗಡಿಯಲ್ಲಿ , ಚಪ್ಪಲಿ ಅಂಗಡಿಗಳಲ್ಲಿ ಬ್ಯಾರಿ ಭಾಷೆಯಲ್ಲೇ ಮಾತಾನಾಡಿಸಿ, ನನ್ನನ್ನೂ ತಾತ್ಕಾಲಿಕ ಬ್ಯಾರಿ  ಮಾಡಿಸಿವ್ಯಾಪಾರ ಕುದುರಿಸಿದ್ದು ಇದೆ. ಮತ್ತೆ ಬ್ಯಾರ್ತಿ ಹುಡುಗಿ ನಕ್ಕದು ಇದೆ

ಗಡ್ಡದಲ್ಲೂ ಹಲವು ವಿಧವಿದೆ ಕೈಯಾಡಿಸಿದರೆ ಕಂತಿದರೆ ಅದು ಪೊಕ್ರಿ ಗಡ್ಡ, ಅದೆಲ್ಲೋ ಮೂಲೆಯಲ್ಲಿ ಒಂದು ನಾಕು ಕೂದಲು ಬೆಳೆದರೆ ಹೋತ ಗಡ್ಡ, ಸಾಧಾರಣ ಉದ್ದವಿದ್ದರೆ ಹೆಂಡತಿ ಗರ್ಭಿಣಿಯೋ ಎಂಬ ಗಡ್ಡ, ಮತ್ತಷ್ಟು ಮುಖ ತುಂಬಾ ದಪ್ಪವಾಗಿದ್ದರೆ ಏನು ಹುಡುಗನಿಗೆ ಹುಷಾರಿಲ್ವಾ? ಎಂಬಾ ಗಡ್ಡ. ಒಟ್ಟಾರೆ ಅಪರಾಧಿ,  ಗಡ್ಡವಂತೂ ಸತ್ಯ. ಹಲವು ಬಾರಿ ಅತ್ತಿಗೆಯಂದಿರ ಬಾಯಿ ಮುಚ್ಚಿಸಿದ್ದು ಇದೆ. ತಮಗೆ ಗಡ್ಡ ಬರುವುದಿಲ್ಲವೆಂದು ನಂಜಿ ಕಾರುವುದು ಅಲ್ವೇ? ಎಂದು ಕೇಳಿ  ಮತ್ತೆಂದೂ ನನ್ನ ಗಡ್ಡದ ಬಗೆಗೆ ಪ್ರಶ್ನಿಸದ ಹಾಗೆ ಮಾಡಿದಿದೆ. ಅವರಿಗೆ ವಿಷಯ ಗೊತ್ತಿಲ್ಲ, ದಿನಚರಿಯ ಹಲವು ನಿಮಿಷಗಳು ಉಳಿಯುತ್ತವೆಯೆಂದು, ಮೊಗದ ಸೌಂದರ್ಯ ಕಾಪಾಡುತ್ತದೆಯೆಂದು, ಮುಖವೂ ತೇವವಾಗಿಡುತ್ತದೆಯೆಂದು, ಜೊತೆಗೆ ಮೊಡವೆಗಳು ಕಾಣಿಸುವುದಿಲ್ಲವೆಂಬ ಸತ್ಯಗಳು. ಗಡ್ಡ ತೆಗೆದ ಗದ್ದ ಅದೇನು ಸುಂದರ ಗೊತ್ತಿಲ್ಲ ಕಲಾಯಿ ಹಾಕದ ಕಿಜಿಯ ಪಾತ್ರೆಯಂತೆ ಚುರುಪು ಚುರುಪು ಗಡ್ಡದ ಮಾಸಿದ ಚುಕ್ಕಿಗಳ ಸಶೇಷವಲ್ಲದ ಬಿಂಬ ಮಾತ್ರ ಸತ್ಯ

ತಮಗೂ ಗೊತ್ತಿರಬಹುದು ಕರಿಯ ಜನಾಂಗದ ಪ್ರಥಮ ಮತ್ತು ಅಮೆರಿಕದ 16ನೇ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ಗಡ್ಡ 
ಇಡುತ್ತಿದ್ದರು. ಅವರದೇಲ್ಲ ಭಾವಚಿತ್ರಗಳಲ್ಲಿ ನೋಡಬಹುದು. ನೀವೇನಾದ್ರು ಪ್ರೀತಿಪ್ರೇಮ ವೈಫಲ್ಯ ಇದ್ದಿರಬೇಕು ಎಂದುಕೊಂಡರೆ  ಅದು ಸುಳ್ಳು  ಅಚ್ಚರಿ ಎಂದರೆ ಅವರು ಗಡ್ಡ ಬಿಡಲು ಪ್ರೇರಣೆ ನೀಡಿದ್ದು  11 ಹರೆಯದ ಪೋರಿಯೊಬ್ಬಳ ಪತ್ರವಂತೆ. 1860 ಅಕ್ಟೋಬರ್‌, ಆಗಷ್ಟೆ ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆನಡೆಯುವುದರಲ್ಲಿತ್ತುರಿಪಬ್ಲಿಕನ್‌ ಪಕ್ಷದಿಂದ ಲಿಂಕನ್ಅಧ್ಯಕ್ಷೀಯ ಅಭ್ಯರ್ಥಿಯಾಗಿ ಘೋಷಣೆಯಾಗಿತ್ತು. ಅದೇ ಸಮಯಕ್ಕೆ  ನ್ಯೂಯಾರ್ಕ್ ವೆಸ್ಟ್  ಫೀಲ್ಡ್ನಿಂದ ಗ್ರೇಸ್ಬೆಡೆಲ್ಸ್ಎಂಬ 11 ವರ್ಷದ ಪುಟಾಣಿ ಬರೆದ ಪತ್ರ ಭವಿಷ್ಯದ ಅಧ್ಯಕ್ಷನಾಗಲು ಕನಸು ಹೆಣೆಯುತಿದ್ದ  ಅಬ್ರಹಾಂ ಲಿಂಕನ್ ಕೈ ಸೇರಿತ್ತು. ಅದರಲ್ಲಿ ನಾನು 11 ವರ್ಷದ ಬಾಲಕಿಯಾಗಿದ್ದು, ನೀವೇ ದೇಶದ ಅಧ್ಯಕ್ಷರಾಗಬೇಕೆಂದು ನಾನು ಬಯಸಿದ್ದೇನೆ. ನಾನೇನಾದರು ಹುಡುಗನಾಗಿದ್ದರೆ ನಿಮಗೆ ಓಟ್ಮಾಡಬಹುದಿತ್ತೇನೋ ಆದಗ್ಯೂ  ನನಗೆ ನಾಲ್ಕು ಮಂದಿ ಅಣ್ಣಂದಿರಿದ್ದು, ಅವರೆಲ್ಲರೂ ನಿಮಗೆ ಓಟ್ಮಾಡುವಂತೆ ಕೇಳುತ್ತೇನೆ. ಆದರೆ ಇದಕ್ಕೊಂದು ಷರತ್ತು. ನಿಮ್ಮ ಮುಖ ತುಂಬಾನೆ ಸಣಕಾಲಾಗಿದ್ದು ನೀವು ಗಡ್ಡ ಮೀಸೆ ಬಿಡುವುದು ಉತ್ತಮ. ಗಡ್ಡ ಬಿಡುವ ಗಂಡಸರನ್ನು ಕಂಡರೆ ಮಹಿಳೆಯರು ಆಕರ್ಷಿತರಾಗುತ್ತಾರಂತೆ. ಆಗ ಅವರ ಗಂಡಂದಿರಿಗೆ ನಿಮಗೆ ಓಟು ಹಾಕುವಂತೆ ಒತ್ತಾಯಿಸುತ್ತಾರೆ ಹಾಗೂ ತಾವು ನಮ್ಮ ಅಧ್ಯಕ್ಷರಾಗುತ್ತೀರಿ  ಎಂದು ಬರೆದಿತ್ತು.   ಪುಟಾಣಿಯ ಬಯಕೆಯಂತೇ ಗಡ್ಡ ಬಿಡುತ್ತೇನೆ ಎಂದು ಲಿಂಕನ್‌  ಹೇಳಿಕೊಂಡಿದ್ದರಂತೆ, ಹಾಗೂ ಜೀವನ ಪೂರ್ತಿ ಗಡ್ಡಧಾರಿಯೇ ಆಗಿದ್ದರು
ಹೌದು ವ್ಯಕ್ತಿಯೊಬ್ಬನ ಗಡ್ಡ ಅವನ ತುಂಟ ಮುಗುಳ್ನಗೆಯನ್ನುಮುತ್ತುಕೊಡುವ ತುಟಿಗಳನ್ನು ಅಡಗಿಸಲು ಬಹುದು, ಆದರೆ ಆತನ ವ್ಯಕ್ತಿತ್ವ, ನಿಲುವು, ಜಾಣ್ಮೆಯನಲ್ಲ,   ಅವನು ಅವನೇ.. ಬದಲಾದ್ದು ನಮ್ಮ ನೋಟ ಅಷ್ಟೇ.... ಬಿಳಿ ತೊಗಲು ಚಂದ, ತಲೆಕೂದಲು ಇಲ್ಲದವನು ಅಂದವಿಲ್ಲ, ಗಡ್ಡಬಿಟ್ಟವರೆಲ್ಲ ಸುಖವಲ್ಲ ಎಂಬ ನಮ್ಮ ಚಿಂತನೆ ಬದಲಾಯಿಸಬೇಕಾಗಿದೆ. ಅಲ್ವೇ?


Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...