Wednesday, March 13, 2019

ನನ್ನಜ್ಜಿ, ನಿಮ್ಮಜ್ಜಿಯಂತೆ  ಪಿರಿಪಿರಿ ಮರೆ, ಬೆಳಗ್ಗೆ ಬೇಗ ಎದ್ದು ನನ್ನ ಪುಟಾಣಿ ಕೊಡಪಾನವನ್ನು ಗೊತ್ತಾಗದ ಹಾಗೆ ತೆಗೆದುಕೊಂಡು ಹೋಗಿ ತುಲಸಿಗೆ ನೀರು ಹಾಕುತ್ತಾಳೆ, ಮನೆಯ ಎಡ ಮಗ್ಗುಲಲ್ಲಿ ಇರುವ ಪಾರಿಜಾತ ಹೂ, ಎದುರು ಇರುವ ಬಿಳಿ ದಾಸವಾಳ, ದೈವ ಚಾವಡಿಯ ಹತ್ತಿರದ ಸಂಪಿಗೆಗಳನ್ನು ಒಟ್ಟು ಮಾಡಿ ಕೆಲವನ್ನು ತುಳಸಿ ಕಟ್ಟೆಯಲ್ಲಿಟ್ಟು, ಉಳಿದದ್ದನ್ನು ದೇವರ ಕೊನೆಯಲ್ಲಿ ಇಡುತ್ತಾಳೆ,...ಮತ್ತೆ ಒಂದು ಸುತ್ತಿನ ಮನೆ ಗುಡಿಸುವಿಕೆ, ನಾವು ಪಿನ್ನೆ ಪಿಟ್ಟೆಗಳು ಎದುರಿನ ಅಂಕಣದಲ್ಲಿ ಮಲಗಿ, ಸೂರ್ಯ ಬೆಳಕು ನಮ್ಮನ್ನು ಮುತ್ತಿಡುತಿದ್ದರೆ ಮೆಲ್ಲಗೆ ಮಕ್ಕಳ ಕುಂಡೆಗೆ ಬೆಳಗು ಬಿದ್ರು ಎದ್ದೇಳಲಿಕ್ಕೆ ಆಗಿಲ್ಲ ಅಂತ ಪರೆಂಚಲು ಸುರು ... ಅದು ನಮ್ಮ ರೇಡಿಯೋ ಪ್ರದೇಶ ಸಮಾಚಾರ ಬಿತ್ತರಿಸುವ ಸಮಯ, ಆದುದರಿಂದ ಆಗ ಮಾತ್ರ ಅಜ್ಜಿ ಸುದ್ದಿ ಇರುವುದಿಲ್ಲ ಕಾರಣ ಅಜ್ಜ ಕೇಳುತಿರುತ್ತಾರಲ್ಲ ಹಾಗೆ ಹಹಃ ... 
ಮನೆಯೊಳಗೆ ಕೈಟಾ ಆಡಿದ್ರೆ ಅಂಗಳಕ್ಕೆ ಹೋಗಿ ಅನ್ನುವವರು ಕಾರಣವೇನಿಲ್ಲ ಅವರೇ ಅಲ್ವೇ ಇವತ್ತು ಬೆಳಗ್ಗೆ ಮನೆ ಗುಡಿಸಿದ್ದು, ನಮ್ಮ ಲೋಟನೆ ಸಾಮಾನುಗಳನ್ನು ಎಲ್ಲೆದರಲ್ಲಿ ಬಿಸಾಡಿ, ತೆಂಗಿನ ಗರಿ, ಮಣ್ಣು ಮಸಿ ಎಲ್ಲ ಚೆಲ್ಲಾಡಿದ್ರೆ  ಯಾರಿಗೆ ತಾನೇ ಸಿಟ್ಟು ಬರದು. ಆದರೂ ನಮ್ಮ ಲೊಟನೆಗಳನ್ನು ಜೋಪಾನವಾಗಿ ಮೇಲೆ ತೆಗೆದು ಇಡುತ್ತಿದ್ದರು, ನಮ್ಮ ಟ್ಯಾಂಕರು ಲಾರಿ, ಐಸ್ ಕ್ರೀಮ್ ಬಾಲ್, ಅದರ ಚಮಚ, ಪೀಮಾವ ಮಾಡಿಕೊಟ್ಟ ಲೆಂಕಿರಿಯ ಕೊಳಲು, ಮತ್ತೆ ಅತ್ತೆ ಮನೆಯಿಂದ ಬರುವಾಗ ಚಿತ್ರ ನೋಡಲು ತಂದ ಮಂಗಳ ಪತ್ರಿಕೆ, ಸುಬ್ರಮಣ್ಯ ಷಷ್ಠಿಯಿಂದ ತಂದ ಟಕ ಕಟ ಹೇಳುವ ಕಪ್ಪೆ, ಪುತ್ತೂರು ಕಂಬಲದಿಂದ ತಂದ ಪೀಪಿ ಇನ್ನು ಏನೇನೊ ತುಂಬಿರುತ್ತಿತ್ತು. 
ನದರು 

ನಮ್ಮಜ್ಜಿಯ ಬ್ರಾಂಡ್ ಐಸ್ ಕ್ಯಾಂಡಿ ಅಂದರೆ ಕೇಶವಣ್ಣನ "ಪೇರ್ ತ" ಮತ್ತೆ "ಬೆಲ್ಲೊತ"   ಆದರೆ ಹಿಮಕೆನೆ ಕೊಟ್ಟರೆ ಅಯ್ಯಯ್ಯೋ  ಚವ್ಲಿ ಚವ್ಲಿ ಅಂತ ಅಷ್ಟೊಂದು ಇಷ್ಟ ಇಲ್ಲ , ಅದೇ ಚಾಯ ದಿಕ್ಕೆಲಿನಿಂದಲೇ ತೆಗೆದು ಅರ್ಕಂಜಿಯ ಹಾಗೆ ಕುಡಿಯುವಾಗ ಬಿಸಿ ಇರುವುದಿಲ್ಲ ಮರೆ. 

ಕಾರಲ್ಲಿ ಹೋಗೋದು , ಬಸ್ಸಲ್ಲಿ  ಹೋಗೋದು ಅಂದ್ರೆ ಕಾಲು ಕೊಕ್ಕೆ ಕಟ್ಟುವುದು ಏನು... ಕಾಲು ಏಳೆಯುವುದು ಏನು, ಬೆನ್ನು ನೋವು ಏನು ... ಅದು ಇದು ನೆಪ...  ನಡೆದುಕೊಂಡು ೫ಕೀ.ಮಿ ದೂರದ  ಅಂಬರಪದವು ಗುಡ್ಡದ ಶಿಖರದವರೆಗೂ ಹೋಗ್ತಾರೆ.
.


ಶೀತ ಜ್ವರಕ್ಕೆ ಇಂಗ್ಲೀಷ್ ಮದ್ದು ಅಗಲ್ಲ ಅದು ಕಹಿಯಂತೆ, ಆ ಕಾಳ್ ಜೀರಿಗೆ ಕಾಷಾಯ ೧೦ ಮುಕ್ಕುಲಿಯಾದ್ರೂ ಕುಡಿತ್ತಾರೆ, ಪೇರಲ ಕೊಡಿ, ಅಮೃತ ಬಳ್ಳಿ, ನೆಲ ನೆಲ್ಲಿ, ಕಟ್ರೆ ಗಿಡ ಅದು ಇದು ಹಾಕಿ ಎಷ್ಟು ಕೈಪೆ ಆದ್ರೂ ಬುಲ್ಕ ಅಂತ ಹೊಟ್ಟೆಗೆ ಹೋಗ್ತದೆ. 

 
ಅಂಗಡಿಯಾ ಬೇರೆ ತಿಂಡಿ ಕೊಟ್ಟರೆ ಹಲ್ಲಿಲ್ಲ ಅಂತರೆ, ಎಲೆ ಅಡಿಕೆ ಜಗಿದು ತಿನ್ನುತ್ತಾರೆ, ಚಕ್ಕುಲಿ ಕಟು ಕುಟು ಅಂತ ಶಬ್ದ ಬರ್ತದೆ. 

ಸಂಜೆ ಟಿವಿಯಲ್ಲಿ ಯಾವುದಾದರೂ ಚಲನಚಿತ್ರ ಗೀತೆ ಬಂದ್ರೆ ಇದೆಂಥ ಮರ್ಲು ನಲಿಕೆ, ರೇಡಿಯೋ ಕೇಳಿಸು ಮಂಗಳೂರು ಆಕಾಶವಾಣಿಯಲ್ಲಿ ಪಾರ್ದನ ಬರುತ್ತದೆ.  

ಚಂದದ ರೇಷ್ಮೆ ಸಾರಿ ಕೊಟ್ರೆ, ಇದು ಒಳ್ಳೆದಿಲ್ಲ, ಮಾಸಿ ಹೋಗಿದೆ,  ಸೊಂಟದಲ್ಲೇ ನಿಲ್ಲೋದಿಲ್ಲ !!

ಮನೆಗೆ ಕಂಬಳಿಯೋ, ಮಡಕೆಯೋ , ಮತ್ತಿನ್ನೆನ್ನೋ ಮಾರಿಕೊಂಡು ಬಂದರೆ, ಮನೆಯಲ್ಲಿ ಎಲ್ಲರೂ ಇದ್ರೂ .." ಮನೆಯಲ್ಲಿ ಯಾರಿಲ್ಲ ಮುಂದೆ ಹೋಗಿ " ಎಂತ ಸ್ವಾರ್ಥಿ ಅಜ್ಜಿ ... 


ಪ್ರಾಯಕ್ಕೆ ಬಂದವರನ್ನು ಮಾತನಾಡಿಸುತ್ತಾ ನನ್ನಜ್ಜಿ ಶುರು ಮಾಡುವುದೇ ಮದುವೆ ಆಗಿದೆಯಾ ?(ಮದಿಮೆ ಅತುಂಡ ?) ಅಂತ ಮತ್ತೆ ನನ್ನ ಕಡೆ ತಿರುಗಿ ೧೪ ವರ್ಷದಲ್ಲಿ ಇವನ ದೊಡ್ಡಪ್ಪ , ೧೬ ವರ್ಷದಲ್ಲಿ ಇವನ ೨ನೇ ದೊಡ್ಡಪ್ಪ ಮತ್ತೆ ಇವನಪ್ಪ ..... ಅಜ್ಜಿಗೆ, ಮಕ್ಕಳು , ಮದುವೆ , ಮೊಮ್ಮಕ್ಕಳ ಮದುವೆ ಇದೆ ಆಲೋಚನೆ ಎಂಚಿನ ಪಿರಿಪಿರಿ ಮಾರೆರೆ ..!!


ನನ್ನ ಅಜ್ಜಿಗೆ ಗಡಿಯಾರ ನೋಡಲು ಬರಲ್ಲಾ, ಅದರೂ ಬೆಳಗ್ಗೆ ಸೂರ್ಯನನ್ನೇ ಎಬ್ಬಿಸುತ್ತಾರೆ, ೧೦ ಗಂಟೆಗೆ ಚಾಯ ಕುಡಿತಾರೆ , ೧ ಗಂಟೆಗೆ ಊಟನೂ ಮಾಡ್ತಾರೆ , ಮತ್ತೆ ಸಂಜೆ ೪ ಗಂಟೆಗೆ ಬಯ್ಯಾ ತ ಚಾಯ ಕುಡಿತಾರೆ ನಂಗೆ ಮಾತ್ರ ಆಶ್ಚರ್ಯ ..... ಹೇಗೆ !!!!!

ಹೌದು ಬೆಳಗ್ಗೆ ನಮ್ಮ ಸೇಲಂ ಹುಂಜನ ಕೂಗಿಗೆ, ೧೦ ಗಂಟೆಗೆ ತುಳಸಿ ಕಟ್ಟೆಯ ನೆರಳಿಗೆ, ಮಧ್ಯಾನ ಪಲ್ಲಿಯಲ್ಲಾಗುವ ಬಾಂಗಿಗೆ, ಸಂಜೆ ಮಾಡಿನ ನೆರಳಿಗೆ. 


ಆಧುನಿಕ ಪ್ರಪಂಚದ ಧಾವಂತಗಳು ಮನುಷ್ಯಸಹಜ ಭಾವನೆಗಳನ್ನು, ಸಂಬಂಧಗಳನ್ನು, ಸಂಭ್ರಮಿಸುವ ಮನಸ್ಸುಗಳನ್ನು, ಬಾಲ್ಯದ ಸುಂದರ ಅನುಭೂತಿಯನ್ನು ನಮ್ಮಿಂದ ಅನಾಮತ್ತಾಗಿ ಕಸಿದುಕೊಂಡುಬಿಟ್ಟಿವೆ. ಹಣ ಗಳಿಸುವ ಅನಿವಾರ‌್ಯತೆಯ ಮುಂದೆ ಬೇರೆಲ್ಲ ಸಂತಸಗಳನ್ನೂ ನಾವೇ ಗೌಣವಾಗಿಸಿಕೊಂಡಿದ್ದೇವೆ. ದಿನನಿತ್ಯದ ಗಡಿಬಿಡಿಯ ಬದುಕು, ಇಷ್ಟವಿಲ್ಲದಿದ್ದರೂ ಅನಿವಾರ‌್ಯವಾಗಿ ಮಾಡಬೇಕಾದ ಕೆಲಸಗಳು ಎಲ್ಲವೂ ಸೇರಿ ನಮ್ಮೊಳಗಿನ ಮನುಷ್ಯತನದ ಮೂಲಸತ್ವವನ್ನೇ ನಿರ್ಜೀವಗೊಳಿಸಿವೆ. ಎಲ್ಲೋ ಮಗುವೊಂದು ತುಂಟಾಟ ಮಾಡಿದಾಗ, ಅಜ್ಜ-ಅಜ್ಜಿಯರು ಬೊಚ್ಚು ಬಾಯಿಯಲ್ಲಿ ನಕ್ಕಾಗ ಅರಿವಿಲ್ಲದ ಸಂತಸವೊಂದು ಮನಸ್ಸಲ್ಲಿ ಹುಟ್ಟಿಕೊಂಡು ಬಾಲ್ಯದ ಸುವರ್ಣ ಯುಗವನ್ನು ಕಣ್ಮುಂದೆ ತರುತ್ತದೆ. ಮರೆಯಲ್ಲೇ ವಿಷಾದದ ಕಾರ‌್ಮೋಡವೂ ಸುತ್ತುವರಿಯುತ್ತದೆ.

ಅಜ್ಜ-ಅಜ್ಜಿ ಎಂಬ ಹಳೆ ತಲೆಮಾರು ಮತ್ತು ಮೊಮ್ಮಕ್ಕಳೆಂಬ ಹೊಸ ತಲೆಮಾರಿನ ನಡುವೆ ಅಕ್ಕರೆಯ ಬೆಸುಗೆಯೊಂದು ಬೆಸೆವ ಸಮಯ ಅದು. ಹಳೆ ಬೇರಿನ ಸತ್ವಗಳನ್ನೆಲ್ಲ ಹೊಸ ಚಿಗುರು ಹೀರಿಕೊಳ್ಳುವುದಕ್ಕಿರುವ ಸದವಕಾಶ ಅದು. ಶಾಲೆಯ ಮೆಟ್ಟಿಲನ್ನೂ ಹತ್ತದ ಅಜ್ಜ-ಅಜ್ಜಿಯರು ಬದುಕಿನ ಅನುಭವದಿಂದಲೇ ಪಡೆದ ಡಾಕ್ಟರೇಟ್ ಪದವಿಯನ್ನು ಕಂಡು ಮೊಮ್ಮಕ್ಕಳು ಕಣ್ಣರಳಿಸುವ ಸಮಯ ಅದು. ಮೊಮ್ಮಕ್ಕಳ ಪ್ರತಿ ಚೇಷ್ಟೆಯನ್ನೂ ಸಹಿಸಿಕೊಂಡು, ಅವರ ಬಯಕೆಗಳನ್ನೆಲ್ಲ ಈಡೇರಿಸುತ್ತಾ, ಎಪ್ಪತ್ತು-ಎಂಬತ್ತರಲ್ಲೂ ಹುಡುಗುತನದ ಸಂಭ್ರಮವನ್ನು ಅನುಭವಿಸುವ ಅಜ್ಜ-ಅಜ್ಜಿ ಎಂಬ ಪಾತ್ರಕ್ಕೆ ಮೊಮ್ಮಕ್ಕಳ ಮನಸ್ಸಿನಲ್ಲಿ ಆತ್ಮೀಯತೆ ತುಂಬಿದ ಗೌರವದ ಸ್ಥಾನ ಎಂದೆಂದಿಗೂ ಇರುತ್ತದೆ. 

No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...