"ಕಾಣದ ದೇವರು ಊರಿಗೆ ನೂರು , ಕಾಣುವ ತಾಯೇ ಪರಮ ಗುರು " ಹೌದು ಗರ್ಭ ಕಟ್ಟಿದಂದಿನಿಂದ ತಾಯಿಯೊಂದಿಗಿನ ಅನೂಹ್ಯ ಸಂಬಂಧದ ಎಳೆಕವಲೊಡೆದು , ಬರೀ ಕಣ್ಣಿಗೆ ಕಾಣುವ , ಭಾವಿಸಿದಷ್ಟು ಮುಗಿಯದ, ಮರೆಯದಷ್ಟು ಸ್ಮೃತಿಗಳು, ಒಂಬತ್ತು ತಿಂಗಳ ಕಾಲ ಅಮ್ಮನುಂಡರೆ ನನಗೆ ತೃಪ್ತಿ, ಅಮ್ಮ ಉಸಿರಾಡಿದರೆ ನನಗೆ ಉಸಿರು, ಅದೇ ಇಂದು ನಾನುಂಡರೆ ಅಮ್ಮನಿಗೆ ತೃಪ್ತಿ . ನಾನು ಚೆಲುವಲ್ಲಿದ್ದರೆ ಅಮ್ಮನಿಗೆ ಖುಷಿ, ಏನೋ ಈ ಪ್ರಾಕೃತಿಕ ಬಂಧನ ಜೀವ ಜೀವಗಳ ನಡುವೆ ಉಲ್ಲಾಸದ ಬತ್ತಿಯಂತೆ ಅಲ್ಲಾಡುತ್ತಿದೆ.
ತುತ್ತು ತಿನ್ನಲು ಹಠತೊಟ್ಟರೆ ಮುತ್ತು ನೀಡುತ್ತಾ, ಅಪ್ಪನನ್ನೇ ಆನೆ ಮಾಡಿ ನನ್ನ ಅಂಬಾರಿಯಂತೆ ಕೂರಿಸಿ ಏನೆಲ್ಲಾ ಆಟ ಆಡಿಸಿ ಚಂದಮಾಮನ ಕೊಡಿಸೋ ಆಸೆ ತೋರಿಸಿ ನನ್ನ ಕಿಲ ಕಿಲ ನಗುವಲಿ ಆ ನಗುವ ನಡುವಲಿ ತುತ್ತು ತಿನ್ನಿಸಿ ಏನೆಲ್ಲಾ ಸಂತಸವ ಕಾಣುತ್ತಿದ್ದೆ ಆಲ್ವಾ. "ಕುಕ್ಲು ಬಾಬೆ ಕುಕ್ಲು" ಅಂತ ಹೇಳಿ ತಲೆ ಅಲ್ಲಾಡಿಸುವುದನ್ನು , ತಿರುಗಿಸುವುದನ್ನು ನೋಡುವ ನಿನ್ನ ಕುಶಿ, ಅಲ್ಲೆಲ್ಲೋ ಪುಟ್ಟ ಹೆಜ್ಜೆಗಳಿಗೆ ಬಲವಿಲ್ಲದೇ ಬಿದ್ದರೆ ಕುಂಡೆಗೆರಡು ಪೆಟ್ಟು ಕೊಟ್ಟು ಎಬ್ಬಿಸುತ್ತಿದ್ದ ನಿನ್ನ ಅರೈಕೆ, ಮಣ್ಣುನ್ನು ತಿನ್ನಲೋ , ಜಗಲಿಯಲ್ಲಿ ಇದ್ದ ಕೋಳಿ ಹಿಕ್ಕೆಯ ಹಿಂದೆ ಹೋದರೆ "ಬಜೀ ಕೊಳಕು ಬಾಲೆ" ಅಂಥ ಮುದ್ದಿಸುತಿದ್ದದ್ದು, ಸೂಜಿ ಕೊಟ್ಟರೆ ನೀನಗೆನೆ ನನ್ನಿಂದ ಜಾಸ್ತಿ ನೋವಾಗೋದು, ಮತ್ತೆ ಹೆಚ್ಚಾಗಿ ನಾನು ಕೇಳುವ ಮೊದಲೇ ನಿನಗೆ ನನ್ನೆಲ್ಲ ಬೇಕು ಬೇಡಗಳೆಲ್ಲಾ ಗೊತ್ತಾಗಿ ಬಿಡುತಿತ್ತು, ಹೌದು ಇದು ಆ ಮಧುರ ಭಾಂದವ್ಯದ ಕುರುಹುಗಳು.
ನನ್ನಮ್ಮ ನಸುಕಿನಲ್ಲೆದ್ದು ಸೂರ್ಯನನ್ನೇ ಎಬ್ಬಿಸಲು ಹೊರಡುವವಳು , ತುಳಸಿ ದೇವಿಗೆ ಸುತ್ತು ಬಂದು ಬಿಂದಿಗೆ ನೀರು ಸೇದಿ , ದಿನಚರಿಗೆ ಹಾಜರಿ ... ಅಮ್ಮನ ಕಡೆಯುವ ಕಲ್ಲು ಗಡ - ಗಡವೆಂಬ ಸದ್ದು ಮತ್ತು ಮಂಗಳೂರು ಆಕಾಶವಾಣಿಯ ಸುಪ್ರಭಾತದ ಜುಗಲ್ ಬಂಧಿಯೊಂದಿಗೆ ನನ್ನನ್ನು ಎಬ್ಬಿಸುತ್ತಿತ್ತು. ಅರೆ ಬಿಸಿ ಮಾಡಿದ ತಂಗಳನ್ನ ಮತ್ತು ಮೊಸರಲ್ಲಿ ನಮ್ಮನ್ನು ಉಣ್ಣಿಸಿ, ಗಡಿ ಬಿಡಿಯಲ್ಲಿ ಅಪ್ಪನಿಗೆ ಪೋದಿಕೆ ಕಟ್ಟಿ , ಆಗ ತಾನೇ ಸಿದ್ದವಾದ ಪದಾರ್ಥ ಮತ್ತೆ ಕುಚ್ಚಲಕ್ಕಿ ಅನ್ನ ವನ್ನು ನಮ್ಮ ಶಾಲೆಯ ಚಿಣ್ಣ ಚಿಣ್ಣ ಬುತ್ತಿಗಳಿಗೆ ತುಂಬಿಸಿ ಪ್ಲಾಸ್ಟಿಕ್ ಲಕೋಟೆಯಲ್ಲಿ ಕಟ್ಟಿ ಹೊರಡಿಸುವುದರಲ್ಲಿ ಅಮ್ಮನ ಬೆಳಗಿನ ಸಂಭ್ರಮ ಕಳೆಯುತ್ತಿತ್ತು .
ಅಮ್ಮ |
ಇಂದು ನನ್ನ ನೋವಿಗೆ ತೇವಗೊಳ್ಳುತಿದ್ದ ಅಮ್ಮನ ಕಣ್ಣು ಸ್ವಲ್ಪ ಗುಂಡಿಯಲ್ಲಿವೆ , ಮೊಗದಲ್ಲಿ ಭಾವನೆಯ ಗೆರೆಗಳು ದಣಿದ ನೆರಿಗೆಗಳಿವೆ, ಮಾತಿನ ಧ್ವನಿ ತೊದಳುತಿವೆ , ಮಗ ನನ್ನಿಂದ ಎತ್ತರ ಬೆಳೆದಿದ್ದನೆಂದೋ , ಶಾಲೆಗೆ ಹೋಗಿದನೆಂದೋ, ಮಾತನ್ನು ಕೇಳುವುದಿಲ್ಲವೆಂದೋ , ಸ್ವಲ್ಪ ಹಿತ ನುಡಿಯು ಕಡಿಮೆಯಾಗಿದೆ ಅಷ್ಟೇ ... ಸೇರುಗಟ್ಟಲೆ ಪ್ರೀತಿ , ಬೊಗಸೆ ತುಂಬಾ ಮಮತೆ ಕೊಟ್ಟು ಭೌತಿಕ ಜೀವ ನೀಡಿ ,ಅಪ್ಪನಾಗಿ ಬುದ್ದಿ ಹೇಳುವ , ಅಜ್ಜಿಯಾಗಿ ಕಥೆ ಹೇಳುವ ನನ್ನಮ್ಮನಿಗೆ ಈ ಹಾಡು
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಳಲೇ ಬೇಕು ಈ
ಮನೆ ಬೆಳಕಾಗಿ ....
ಅಮ್ಮನನ್ನು ನೆನೆಸಿಕೊಂಡ ರೀತಿಯಲ್ಲೇ ಗೆದ್ದಿದ್ದಿರಿ ಭರತಣ್ಣ.
ReplyDeleteನಾವು ಭರ್ತೀ ಏಳು ಜನ ಅಣ್ಣ ತಮ್ಮಂದಿರು. ನಮ್ಮ ತಂದೆಯವರು ತೀರಿಕೊಂಡಾಗ ನನಗೆ ಮೂರು ವರ್ಷ. ಯಾವ ಅಣ್ಣಂದಿರಿಗೂ ಓದು ಮುಗಿದಿರಲಿಲ್ಲ ಮತ್ತು ಮದುವೆಯೂ ಇಲ್ಲ. ಅದು ಹೇಗೆ ತೂಗಿದಳೋ ಮಹತಾಯಿ. ಅವಳಿಗಿದೋ ನನ್ನ ಸಲಾಮು...
shared at:
https://www.facebook.com/photo.php?fbid=602047969839656&set=gm.483794418371780&type=1&theater
ಅಮ್ಮ ಶಬ್ಧಕ್ಕೆ ಇದೆ ಅಂತಹ ಶಕ್ತಿ ... ಅದುಮಿದ ಪ್ರಭೆ ಬೆಳಕಾಗಲು ಇಂತಹುಗಳು ನೆಪ ಮಾತ್ರ ...ನಿಮ್ಮ ಅಮ್ಮನಿಗೊಂದು ನನ್ನ ಸಲಾಂ.
DeleteGood one :-)
ReplyDeleteಧನ್ಯವಾದಗಳು
Deleteಅಪ್ಪಾನೂ ಕಡಿಮೆ ಇಲ್ಲ!
ReplyDeleteಅದರಲ್ಲೂ ಎರಡು ಮಾತಿಲ್ಲ .
DeleteTumba chennagide
ReplyDeleteಧನ್ಯವಾದಗಳು
DeleteTumba chennagide
ReplyDeleteBahala Shresta Baraha....
ReplyDelete