ಏನು,.. ಚೆಲುವಿನ ಯೌವ್ವನವೂ,
ಕಾಡುತಿಹುದು ಅನುದಿನವೂ ಅನುಕ್ಷಣವೂ.
ಮನದ ಮತ್ತಿನ ಮದ್ಧಿನ ಮಂಪರಿನ ವೇದನೆ
ಹೃದಯವೆಂಬ ಗುಡಿಯ ಗಂಧಪ್ರಸಾದದಿಂದ ನಿವೇದನೆ.
ಏನೋ ಹೊಸ ತರವ ಬಯಸುವ ತುಡಿತ,
ಅಲ್ಲೆಲ್ಲೊ, ಅವರಿವರ ನುಡಿಮುತ್ತುಗಳ ಕಡಿತ.
ಸ್ಮೃತಿ ಪಟಲದೊಳಗೆ, ಕಂಚು ಕುಂಚ ಕಲೆಗಾರನ ಚಿತ್ತಾರ,
ಭಾವನೆಯಿಂದ ಕೂಡಿದ ಮೊಗದ ನೆರಿಗೆಯ ಮೂಲಕ ಬಿತ್ತಾರ.
ಕಾಯದೊಳಗನ ಅಂಗ-ಅಂಗದೊಳಗಿನ, ನವ-ನವೀನತೆಯ ನವಿರೇಳುವ ಮಂದಾರ
ಕರ-ಕಾಲುಗಳೆಲೆಲ್ಲೂ ವಿಕೃತಿಯೊಳಗಿನ ವಿನಯದ ವಿದ್ಯುತ್ ಸಂಚಾರ.
ಎದೆಯ ಗೂಡ ವೀಣೆಯ ಮಧುರ ತಂತಿಗಳ ಕಂಪನ,
ನಯನ ಮಂಟಪದಲ್ಲಿ ಅವರಿವರ ಹಗ್ಗ ಜಗ್ಗಾಟದ ನರ್ತನ.
ರೋಮ-ರೋಮಗಳೊಳಗೆ, ಸೈನಿಕ ಪಡೆಯ ಸೆಟೆಯ ಜಲ್ಲನದ ಜತನ.
ಅಸ್ಧಿಮಜ್ಜೆಯ ಅಣು ಕಣಗಳಲ್ಲಿ, ಪಾದರಸದ ಚಲನವಲನ
ಮನದೊಳಗೆ ಮೆಲ್ಲನೆ ಮೆಲ್ಲಗೆ ಮಂಡಿಗೆ ಮೆಲ್ಲುವ ಕಗ್ಗಂಟು,
ಬಾಯಿ ತೆರೆದು ಬಣ್ಣಿಸಲಾಗದ ಭೀಕರ ಬಿಕ್ಕಟ್ಟು...!!!
- ಭರತೇಶ ಆಲಸಂಡೆಮಜಲು
ಹೊಸ ಬ್ಲಾಗ್ ಓದಿಸಿದ್ದಕ್ಕಾಗಿ ತಮಗೆ ವಂದನೆಗಳು.
ReplyDeleteಮೊದಲು ಮನ ಸೆಳೆದದ್ದು ತಮ್ಮ ಭಾಷಾ ಬಳಕೆ ಮತ್ತು ಸುಲಲಿತ ಶೈಲಿ.
best of the best:
"ನಯನ ಮಂಟಪದಲ್ಲಿ ಅವರಿವರ ಹಗ್ಗ ಜಗ್ಗಾಟದ ನರ್ತನ"
ಧನ್ಯವಾದಗಳು , ಮತ್ತೆ ತಮ್ಮ ಪಥವನ್ನು ಕಾಯುತಿರುತ್ತೇನೆ
ReplyDelete