ಕನ್ನಡದಲ್ಲಿ ನನ್ನವಳ ಸೌಂದರ್ಯ ವರ್ಣಿಸೋದು... ಚಿನ್ನ , ರನ್ನ , ಮುತ್ತು, ಮುದ್ದು ಅಂತಿರಲ್ಲ ಅದರಂತೆ ತಾವೂ ನಿಮ್ಮವರನ್ನು ವರ್ಣಿಸಿ ಕುಶಿ ಆಗಬಹುದು,
ಮುಖಹೊತ್ತಗೆಯ ಕಾಜಾಣ ಮಿತ್ರರಿಂದ ಎರವಲು ಪಡೆದದ್ದು. ನೀವೂ ನಿಮಗೆ ಗೊತ್ತಿರುವುದನ್ನು ಸೇರಿಸಿ ನಾನು ತಿಳಿದು ಕೊಳ್ಳುತ್ತೇನೆ.
1.ಕಣ್ಣಿಗೆ ಅಂಜನ ಹಾಕ್ಕೊಂಡು ಹುಡುಕಿದ್ರೂ ಇಂಥವಳು ಸಿಗೋಲ್ಲ.
2.ಹತ್ತು ಜನರಲ್ಲಿ ಎದ್ದು ಕಾಣುವಳು.
3.ಹಾಲಲ್ಲಿ ತೊಳ್ದಂಗವ್ಳೆ, ಹಲಸಿನ ತೊಳೆ ಇದ್ದಂಗವ್ಳೆ.
4.ನಾಕು ಜನ ತಿರುಗಿ ನೋಡೋ ಸೌಂದರ್ಯ ಅವಳದು.
5.ರಂಭೆ ರಂಭೆ ಹಾಗಿದ್ದಾಳೆ.
6.ಕಬ್ಬಿನ ಜಲ್ಲೆ ಹಾಗೆ ವಯ್ಯಾರಿ .
7.ಪೊರೆ ಕಳಚಿರೋ ಮಿಡಿನಾಗಮ್ಮನ ಹಾಗೆ ಮಿರಿ ಮಿರಿ ಅಂತಿದ್ದಾಳೆ.
8.ಬೆಣ್ಣೆ ಬೆಣ್ಣೆ ಹಂಗಿದ್ದಾಳೆ.
9.ಎದೆಯಲ್ಲಿ ಅವಲಕ್ಕಿ ಕುಟ್ಟೋ ಹಂಗೆ ಹೆಜ್ಜೆ ಹಾಕ್ತಾಳೆ.
10.ಮೊಲ್ಲೆ ಹೂ ಮಾಲೆ ಹಂಗವಳೆ.
11.ಗೊನೆ ಬಿದ್ದಿರೋ ಬಾಳೆ ಥರ ಸಿಂಗಾರಿ. ಸಾಕ್ಷಾತ್ ಲಕ್ಷ್ಮೀ...
12.ಪೆಡ್ದೆ ಹಸು ಹಂಗೆ ಗಡಬಡಿಸ್ಕೊಂಡಿರುತ್ತೆ..
13.ಮುಟ್ಟಿದ್ರೆ ಕೊಳೆ ಹತ್ತುತ್ತೆ.. ನೋಡಿದ್ರೆ ದೃಷ್ಟಿ ತಾಗುತ್ತೆ,
14.ಬೆಳ್ದಿಂಗಳಿಗೂ ಬಾಡ್ತಾಳೇನೋ ಅನ್ನೋ ಹಂಗಿದ್ದಾಳೆ
15.ಭಗವಂತನಿಗೆ ತುಂಬಾ ಪುರುಸೊತ್ತು ಇತ್ತೇನೋ, ಕಣ್ಣು, ಮೂಗು, ಬಾಯಿ ತಿದ್ದಿತೀಡಿ ಬರೆದಹಾಗೆ ಇದ್ದಾಳೆ.
16.ಹುಡುಗಿ ಒಳ್ಳೆ ಚಂದನದ ಗೊಂಬೆ ಇದ್ದಹಾಗೆ ಇದ್ದಾಳೆ.
16.ಹುಡುಗಿ ಒಳ್ಳೆ ಚಂದನದ ಗೊಂಬೆ ಇದ್ದಹಾಗೆ ಇದ್ದಾಳೆ.
17.ಸುರ ಸುಂದರಿ, ಮುಟ್ಟಿದ್ರೆಲ್ಲಿ ನಲುಗ್ತಾಳೊ ಅನ್ನೊಹಾಗಿದ್ಲು.. ,
18.ಐದು ಮಲ್ಲಿಗೆ ತೂಕದವಳು,
19ದಂತದ ಬೊಂಬೆ,
20.ನಕ್ಕರೆ ಬೆಳದಿಂಗಳು ಚೆಲ್ಲಿದ ಹಾಗೆ,
21.ನಡೆದರೆ ಮಯೂರ ನರ್ತನ, ಹಾಡಿದರೆ ಗಂಧರ್ವ ಗಾನ.
22.ಅವಳನ್ನು ಕೈ ತೊಳೆದು ಮುಟ್ಟಬೇಕು.
No comments:
Post a Comment