Thursday, January 1, 2015

ಭರಥನ ಅಜ್ಜಿ ಪಿರಿಪಿರಿ;

ಭರಥನ ಅಜ್ಜಿ ಪಿರಿಪಿರಿ;
ನನ್ನ ಅಜ್ಜಿ 

ನಮ್ಮಜ್ಜಿಗೆ,

*ಹಿಮಕೆನೆ ಕೊಟ್ಟರೆ ಅಯ್ಯಯ್ಯೋ  ತಂಪು ತಂಪುಂತಾ ಹೇಳ್ತಾರೆ, ಅದೇ ಚಾಯ ದಿಕ್ಕೆಲಿನಿಂದಲೇ ತೆಗೆದು ಅರ್ಕಂಜಿಯ ಹಾಗೆ ಕುಡಿಯುತ್ತಾರೆ.

*ಕಾರಲ್ಲಿ ಹೋಗೋದು , ಬಸ್ಸಲ್ಲಿ  ಹೋಗೋದು ಅಂದ್ರೆ ಕಾಲು ಕೊಕ್ಕೆ ಕಟ್ಟುವುದು,ಅದು ಇದು ನೆಪ...  ನಡೆದುಕೊಂಡು ೩ಕೀ.ಮಿ ಅದ್ರೂ ತೊಂದ್ರೆ ಇಲ್ಲ.

*ಶೀತ ಜ್ವರಕ್ಕೆ ಇಂಗ್ಲೀಷ್ ಮದ್ದು ಅಗಲ್ಲ ಅದು ಕಹಿಯಂತೆ, ಆ ಕಾಳ್ ಜೀರಿಗೆ ಕಾಷಾಯ ೧೦ ಮುಕ್ಕುಲಿಯಾದ್ರೂ ಕುಡಿತ್ತಾರೆ.

*ಎಸ್ಕಲೇಟರ್ ನಲ್ಲಿ ಹೋಗೋಣ ಅಂದ್ರೆ ನಾನು ಜಾರಿ ಬಿದ್ದೇನು ಅಂತರೆ, ನಮ್ಮ ಅಂಬರಪದವು ಗುಡ್ಡದ ಶಿಖರದವರೆಗೂ ಹೋಗ್ತಾರೆ.

*ಅಂಗಡಿ ತಿಂಡಿ ಕೊಟ್ಟರೆ ಹಲ್ಲಿಲ್ಲ ಅಂತರೆ, ಎಲೆ ಅಡಿಕೆ ಜಗಿದು ತಿನ್ನುತ್ತಾರೆ .

*ಸಂಜೆ ಟಿವಿಯಲ್ಲಿ ಯಾವುದಾದರೂ ಚಲನಚಿತ್ರ ಗೀತೆ ಬಂದ್ರೆ ಇದೆಂಥ ಮರ್ಲು ನಲಿಕೆ(ಹುಚ್ಚು ಕುಣಿತ ) ರೇಡಿಯೋ ಕೇಳಿಸು ಮಂಗಳೂರು ಆಕಾಶವಾಣಿಯಲ್ಲಿ ಪಾರ್ದನ ಬರುತ್ತದೆ . 

* ಇನ್ನೂ ಚಲನಚಿತ್ರ ಇಟ್ರೆ , ಅಡಕ ಮುದ್ರಿಕೆ ಹಾಕು ಯಕ್ಷಗಾನ ನೋಡುವಾ ... 

* ಚಂದದ ರೇಷ್ಮೆ ಸಾರಿ ಕೊಟ್ರೆ, ಇದು ಒಳ್ಳೆದಿಲ್ಲ,  ಸೊಂಟದಲ್ಲೇ ನಿಲ್ಲೋದಿಲ್ಲ !!

* ಮನೆಗೆ ಕಂಬಳಿಯೋ, ಮಡಕೆಯೋ , ಮತ್ತಿನ್ನೆನ್ನೋ ಮಾರಿಕೊಂಡು ಬಂದರೆ ಮನೆಯಲ್ಲಿ ಎಲ್ಲರೂ ಇದ್ರೂ .." ಮನೆಯಲ್ಲಿ ಯಾರಿಲ್ಲ ಮುಂದೆ ಹೋಗಿ " ಸ್ವಾರ್ಥಿ ಅಜ್ಜಿ ... 


*ಪ್ರಾಯಕ್ಕೆ ಬಂದವರನ್ನು ಮಾತನಾಡಿಸುತ್ತಾ ನನ್ನಜ್ಜಿ ಶುರು ಮಾಡುವುದೇ ಮದುವೆ ಆಗಿದೆಯಾ ?(ಮದಿಮೆ ಅತುಂಡ ?) ಅಂತ ಮತ್ತೆ ನನ್ನ ಕಡೆ ತಿರುಗಿ ೧೪ ವರ್ಷದಲ್ಲಿ ಇವನ ದೊಡ್ಡಪ್ಪ , ೧೬ ವರ್ಷದಲ್ಲಿ ಇವನ ೨ನೇ ದೊಡ್ಡಪ್ಪ ಮತ್ತೆ ಇವನಪ್ಪ ..... ಅಜ್ಜಿಗೆ, ಮಕ್ಕಳು , ಮದುವೆ , ಮೊಮ್ಮಕ್ಕಳ ಮದುವೆ ಇದೆ ಆಲೋಚನೆ ಎಂಚಿನ ಪಿರಿಪಿರಿ ಮಾರೆರೆ ..!!


ನನ್ನ ಅಜ್ಜಿಗೆ ಗಡಿಯಾರ ನೋಡಲು ಬರಲ್ಲಾ, ಅದರೂ ಬೆಳಗೆ ಸೂರ್ಯನನ್ನೇ ಎಬ್ಬಿಸುತ್ತಾರೆ, ೧೦ ಗಂಟೆಗೆ ಚಾಯ ಕುಡಿತಾರೆ , ೧ ಗಂಟೆಗೆ ಊಟನೂ ಮಾಡ್ತಾರೆ , ಮತ್ತೆ ಸಂಜೆ ೪ ಗಂಟೆಗೆ ಬಯ್ಯಾ ತ ಚಾಯ ಕುಡಿತಾರೆ ನಂಗೆ ಮಾತ್ರ ಆಶ್ಚರ್ಯ ..... ಹೇಗೆ !!!!!
*
*
*
*
ಬೆಳಗ್ಗೆ ಕೋಳಿ ಕೂಗಿಗೆ, ೧೦ ಗಂಟೆಗೆ ತುಳಸಿ ಕಟ್ಟೆಯ ನೆರಳಿಗೆ, ಮಧ್ಯಾನ ಪಲ್ಲಿಯಲ್ಲಾಗುವ ಬಾಂಗಿಗೆ, ಸಂಜೆ ಮಾಡಿನ ನೆರಳಿಗೆ. 

No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...