Thursday, January 1, 2015

ಹನಿ ಮುತ್ತು

೧. ಪರಿಮಳ ... !!

೦೦೦೦೦೦೦
ಪರಿಮಳ 
ಇರುವವರೆಗೆ 
ಮಾತ್ರ 
ಮುಟ್ಟುವರು 
ಎಲ್ಲ..... 
ಹೂವು
ಹಣ್ಣು
ಹೆಣ್ಣನ್ನು... !!!!??



೨. ನಿತ್ಯ - ಸತ್ಯ ..!!

೦೦೦೦೦೦೦೦
ಹೂವು ಹೆಣ್ಣಾದರೆ ತಾನೇ 
ಹಣ್ಣಾಗುವುದು.. 
ಗಂಡು 
ಮುಟ್ಟದೇ
ಹೆಣ್ಣು ಕೊಡುವುದೇ
ಜಗಕೆ ಕಣ್ಣು...!!!!


೩. ಭರತೇಶ ವೈಭವ...

+++++++++++++
ಭೋಗದ 
ಸಾಗರದೊಳಗಿದ್ದು 
ಯೋಗವ ಮಾಡಿ 
ವಿಷಮ
ವಿಷಯ
ವಿಷವ
ಕಡೆದು
ಭವಮುಕ್ತ
ಪಡೆದ
ಋಷಿ....!!!!


೪. ಮುದಿ ಚಕ್ರ  ... 

೦೦೦೦೦೦
ಜೀವನ ಸವೆಸಿ
ತಿರುಗಣೆ
ಕೀಲು ಸಡಿಲವಾಗಿದೆ
ಎಣ್ಣೆ ಬಿಡುವವರಿಲ್ಲ,
ತುಕ್ಕು ತೆಗೆಯುವವರಿಲ್ಲ,
ಹನಿ ಕಣ್ಣೀರಿಡುವವರಿಲ್ಲ,
ಚಾಕರಿ ಮಾಡಿದರೂ
ಅಷ್ಟೇ ನಿಂದಿಸುವರು
ವಕ್ರ ನಾನಂತೆ....
ಹರಿದ ಹಾದಿಯ
ನಾ ಕಾಣೆ
ಮಾಸಿದ
ನೆನಹು
ಬಾಗಿದ ನಡು ಮಾತ್ರ
ನನಗೆ ಆಧಾರ.



೫. ಹುಣ್ಣಿಮೆ ರಾತ್ರಿ.

೦೦೦೦೦೦೦೦
ಶಶಿಯ
ದುಂಡಾದ 
ರೂಪವ
ಕಂಡು
ಶರಧಿಯು
ಮೋಹದಿಂದ
ಆತನನ್ನು
ಸೇರಲು
ಪುಂಡಾಟವಾಡುತ್ತಿದ್ದಾಳೆ
ಅಳೆತ್ತರದ
ಅಲೆಗಳ
ಜೊತೆ ಸೇರಿ.......




೬. ಶಿಕಾರಿ ...!
೦೦೦೦೦೦೦೦೦

ತೋಟೆಯಿಟ್ಟು
ಬೇಟೆಯಾಡಿದ
ಮಳೆರಾಯ
ನೀಲಾ ಬಾನಿನೊಡಲ
ಸೀಳಿ ಸೀಳುತ್ತಾ
ಕರಿ ಮೇಘಗಳ
ರುಚಿಯ
ಸವಿಯಲು....

೭. ಬಿರು ಬಿಸಿಲು

೦೦೦೦೦೦೦
ಧರಿತ್ರಿ,
ನಿನ್ನೆಯ ರಾತ್ರಿ
ಚಂದ್ರನೊಂದಿಗೆ
ಕಳೆದಲೆಂದು
ರವಿ
ಕೋಪದಿಂದ
ಕಿರಣಗಳ
ಸೂಜಿಯಿಂದ
ಜೀವರಸ
ಹೀರಿ
ಶಿಕ್ಷಿಸುತ್ತಿದ್ದಾನೆ...

೮. ಕೊರಗು .. 
೦೦೦೦೦೦
ಹೆಣ್ಣು ನರೆದರೆ
ಮನೆತುಂಬಾ
ಸಂಭ್ರಮವೇನು?
ಬೊಂಡ ಕುಡಿಸುವುದೇನು?
ಬಣ್ಣಂಗಾಯಿ ತಿನ್ನಿಸುವುದೇನು?
ತಾರಿ ಬೆಲ್ಲ ಕೊಡುವುದೇನು?
ದೊಂಪ ಕಟ್ಟುವುದೇನು?
ನೂಲ ಮದಿಮೆ ಮಾಡಿಸುವುದೇನು?
ಉೂರವರಿಗೆ ಸಮ್ಮಾನ ಬಡಿಸುವುದೇನು?,
ಮತ್ತೆ
ಅದೇ ನಾನು ನರೆದರೆ
ಗೊತ್ತೇ ಇಲ್ಲ
ಕತ್ತೆಗೆ
ಮದುವೆಯು
ಮಾಡಿಸುವುದಿಲ್ಲ...!!

೯. ಮೂಗುತ್ತಿಯ ಆಸೆ !!

೦೦೦೦೦೦೦೦೦೦
ಅವಳ
ಒಂಟಿ
ಮೂಗುತ್ತಿ
ಮಿನುಗಿ
ಕರೆಯುತ್ತಿತ್ತು
ನನ್ನ,
ಶುಭ್ರ ಬಾನಿಗೆ
ಚುಕ್ಕಿಯಾಗಿ ಬಾ
ಜಂಟಿಯಾಗಿ
ವಿಹರಿಸೋಣವೆಂದು..!!

೧೦. ಹುರುಪು,
೦೦೦೦೦
ಅವಳು
ಅಘ್ರಾಣಿಸಿ
ಚುಂಬಿಸಿದಳೆಂದು
ಬೆತ್ತಲೆ ಹೂವು
ನಾಚಿಕೆಯಿಂದ
ಜಡೆಯೊಳಗೆ
ದಿನವೀಡಿ
ಬಾಡದೇ
ನಗುತ್ತಿತ್ತು !!



No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...