Thursday, January 1, 2015

ಸವಿ



೧. ರೂಪ.
ಕಣ್ಮುಚ್ಚಿ
ಕತ್ತಲೆಗೆ
ದೃಷ್ಟಿ ನೀಡಿ
ಹನಿ ಬೆಳಕು
ಕವಳೊಡೆದು
ಮಿಂಚು
ಹರಿಯಿತು
ಹೊಂಚಿ
ಕಾಯುತಿತ್ತು
ಧ್ಯಾನ
ಶೂನ್ಯದೆಡೆಗೆ
ಸಾಗಲು....



೨. ನೆನಹು....
ಮಳೆ ಹನಿ
ಕೊಡೆಯ ಸುತ್ತಲ್ಲೂ
ನರ್ತಿಸುತಿರಲು
ಅವರವರ
ಭಾವ
ಕಣ್ಣೋಳಗೆ
ಜನಿದು
ಮನದಲ್ಲಿ
ಮೊಳೆದು
ಎದೆಯೊಳಗೆ
ಗುನುಗುತ್ತಿದೆ...



೩. ಒಪ್ಪಿಗೆ
ಮುಂದಿಡುವ ಹೆಜ್ಜೆಯ
ನೆನೆದು
ತಲೆ ತಿರುಗಿಸಿ
ಕುಡಿ ನೋಟದ
ಭಾವ ಗುರುತಿಸಿದ
ನನ್ನವಳು
ತಲೆ ತಗ್ಗಿಸಿ
ಸಮ್ಮತಿಸಿದಳು..!







೪. ಭಗ್ನ..??
ಚೌಕ ಫ್ರೇಮಿನ
ಕನ್ನಡಕದ
ಮುದ್ದಾದ
ಹುಡುಗಿ
ನನ್ನ ಪ್ರೆಮಿಸುವಳೇ ?
ಇಲ್ಲ,
ಪ್ರೇಮಿಸಿ
ಫ್ರೇಮಿನೊಳಗೆ
ಬಂಧಿಸುವಳೇ ..??


೫. ದಾನದ ಸೋಲು.
ಸೂರ್ಯ
ವಂಶಜ
ಸುತಪುತ್ರನಾಗಿ
ತಾಯಿಗೆ
ವಾಗ್ದಾನ ನೀಡಿ ನಿಲುಮೆ
ಸೋದರರಿಗೆ
ಪ್ರಾಣದಾನ ಮಾಡಿ
ಕವಚ ಕುಂಡಲವ
ಕಳೆದು
ಕಡೆಗೆ ತಾನೇ
ಲೀನನಾದ.
ದಾನ ಸೋತಿತ್ತು
ಧರ್ಮವನ್ನು
ಗೆಲ್ಲಿಸಿತ್ತು.

೬. ಬೆಳಕ ಕಿಂಡಿ.

ಮನೆಯ ಮಾಡಿನ
ಮೂಲೆ ಹೆಂಚಿನಲ್ಲೊಂದು
ಬೆಳಕಿನ ಸೆರೆ
ಧಾರೆ ಧಾರೆಯಾಗಿ
ಸುರಿಯುತಿದೆ
ಬಾನಿನ ಕನಸು
ಒಳಗಿರುವ ಮನಸೆಲ್ಲ
ತಂಪಾಗಿದ್ದವು
ಮೂಲೆ ಮೂಲೆಗಳಲ್ಲಿ
ತೆನೆ ರಾಶಿ ತುಂಬಿ...

೭. ಮಾಗಿಯ ಮಂಜು

ನವವಧು ಸಿಂಗಾರಿ
ಭೂಮಿಕಾಳ
ಸೌಂದರ್ಯವ
ಹಸಿರ ಸೀರೆಯಲ್ಲಿ
ಮುಂಜಾವ
ರವಿರಾಜ
ನೋಡಬಾರದೆಂದು
ಮಂಜುಳಳಿಂದ 
ಹಿಡಿದ
ಅಂತಃಪಟಲ.


೮. ಅಮಾವಾಸ್ಯೆ
ಶಶಿಯನ್ನು
ಕದ್ದು
ಅರೆದು
ಮಾರುತ್ತಿದ್ದಾಳೆ
ನಮ್ಮ ರಾಧಾಮ್ಮ
ಅವಳ
ಹಾಲಿನ
ದುಂಡಗಿನ
ಬಟ್ಟಲೊಳಗೆ
ಕರಗಿ
ನೀರಾದದನ್ನು
ನಾ
ಕಂಡೆ...!

೯. ಹುಣ್ಣಿಮೆ

ಶರಧಿಯು
ಚಂದಿರನ
ದುಂಡು
ಮೊಗವ
ನೋಡಿ
ಬಯಸಿ ಸೇರಲು
ಅಲೆಗಳೊಂದಿಗೆ
ಸೇರಿ
ಟಾಟಾ
ಮಾಡುತ್ತಿದ್ದಾಳೆ
ಅದ ಕಂಡು
ಶಶಿ
ನಗುತ್ತಿದ್ದಾನೆ.

No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...