Thursday, January 1, 2015

ಭರಥನ ರಗಳೆಗಳು


೧. 
ಧರ್ಮವೆಂದರೆ ಹಿಂದೂ, ಮುಸ್ಲಿಂ , ಕ್ರಿಸ್ತ, ಬೌದ್ದ ಧರ್ಮವಲ್ಲ ... 
ಮರ ಹಣ್ಣು ಕೊಡುವುದು, 
ಹುಲಿ ಹಸಿವಾದಾಗ ಹಸು ತಿನ್ನುವುದು,
ಹಸು ಹುಲ್ಲು ಮೇಯುವುದು,
ಮೋಡ ಮಳೆಗೆರೆಯುವುದು, 
ಭೂಮಿ ಫಲ ನೀಡುವುದು...


೨. 
ದೇಹವೆಂಬ ಜಾತಿಮರ : 

ಆಲೋಚಿಸುವ ಮೆದುಳು ಚಿಪ್ಪು ವಿದ್ಯೆ ನೀಡುವುದಾದರೆ ಬ್ರಾಹ್ಮಣ,
ದುಷ್ಟರಿಂದ ರಕ್ಷಿಸಿ, ದೇಹವನ್ನು ಜತನದಿಂದ ಕಾಪಾಡುವ ಕೈಗಳೇ ಕ್ಷತ್ರಿಯ. 
ವ್ಯಾಪಾರ ಮಾಡಿ, ಮಾಡದೇ ದುಡ್ಡು ತುಂಬಿ ಬೆಳೆದ ಡೊಳ್ಳು ಹೊಟ್ಟೆಯೇ ವೈಶ್ಯ. 
ಎಲ್ಲಾ ಬಾರ ಹೊತ್ತು , ಮೆಲ್ಲಿನೆಲ್ಲರನ್ನೂ ನಡೆಸುವ ಕಾಲೇ ಶೂದ್ರ.


೩. 
೧೯೨೦ರಲ್ಲಿ ೧.೦೦ ರೂಪಾಯಿ 
೧೯೪೦ರಲ್ಲಿ ೧೦.೦೦ ರೂಪಾಯಿ 
೧೯೬೦ರಲ್ಲಿ ೧೦೦.೦೦ ರೂಪಾಯಿ
೧೯೮೦ರಲ್ಲಿ ೧,೦೦೦.೦೦ ರೂಪಾಯಿ
೨೦೦೦ರಲ್ಲಿ ೧೦,೦೦೦.೦೦ ರೂಪಾಯಿ
ತಿಂಗಳ ಆದಾಯ ಇದ್ದ ಮನೆಗಳು ಸಾಧಾರಣ ಮಧ್ಯಮ ವರ್ಗ ಕುಳಿತು ತಿನ್ನೋಕ್ಕೆ ಸಮಸ್ಯೆ ಇರಲಿಲ್ಲ ... ೧೯೨೦ ರ ವಿಷಯ ಗೊತ್ತಿಲ್ಲ ೧೯೪೦, ೧೯೬೦ ರ ಬಗೆಗೆ ಅಜ್ಜ ಹೇಳುತಿದ್ದರು , ೧೯೮೦ ರದ್ದು ಅಪ್ಪ ಹೇಳುತಿದ್ದರು , ೨೦೦೦ ಖುದ್ದು ಅನುಭವ ಇದೆ.
೨೦೨೦ರಲ್ಲಿ ಆದಾಯ ೧,೦೦,೦೦೦. ೦೦ ರೂಪಾಯಿ ಬೇಕೇ ಬೇಕು. ಪ್ರತಿ ೨೦ವರ್ಷ ಕ್ಕೆ ಒಂದು ಸೊನ್ನೆ ಜಾಸ್ತಿ ಸೇರಿಸುತ್ತಾ ಹೋದದ್ದು ಅಷ್ಟೇ... ಯಾವುದೇ ಅರ್ಥಿಕ ತಜ್ಞರ ಅಭಿಪ್ರಾಯದ ಅವಶ್ಯಕತೆ ಇಲ್ಲ, ವಿಮರ್ಶೆಯ ಅಗತ್ಯವೂ ಇಲ್ಲ . ಇದು ಸರಳ ಸೂತ್ರ ಆದುದರಿಂದ ೫ವರ್ಷಗಳಲ್ಲಿ ನಿಮ್ಮ ತಿಂಗಳ ಆದಾಯ ೧,೦೦,೦೦೦.೦೦ ಇಲ್ಲದಿದ್ದರೆ ಜೀವನ ಕಷ್ಟ. ೨೦೨೦ಕ್ಕೆ ನಾನು ಹೇಳಿದ್ದು ಸರಿ ಆದ್ರೆ ನಾನು ಜೋತಿಷಿ ಹಹಹ್ಹ. ತಮಗೂ ಅನುಭವ ಆಗಿದ್ರೆ ಹಂಚಿಕೊಳ್ಳಿ.


೪. 
ಛೇ ೭ವರ್ಷ ಪ್ರಾಥಮಿಕ ಶಾಲೆ, ೩ ವರ್ಷ ಪ್ರೌಡಶಾಲೆ, ೨ವರ್ಷ PUC , ೩ವರ್ಷ ಡಿಗ್ರಿ , ಹೀಗೆ ಜೀವನದ ಅಮೂಲ್ಯ ೧೫ ವರ್ಷವನ್ನು ಕಾಲ ಹರಣ ಮಾಡಿದನ್ನು ನೋಡಿದ್ರೆ ಛೇ, ಡಿಗ್ರಿ ಸರ್ಟಿಫಿಕೇಟ್ ಗಾಗಿ ಓದಿದೆನಲ್ಲ ಅಂತ ಬೇಸರ ಆಗ್ತದೆ... ಅದು ಬಿಟ್ಟು ಕೃಷಿಕ ನಗ್ಬೇಕದ್ರೆ ತೋಟಕ್ಕೆ ಹೋಗಿ ಕೆಲಸ ಮಾಡುತಿದ್ರೆ ಈಗ ಕೃಷಿ ಪಂಡಿತ ಆಗ್ತಿದ್ದೆ .. ಇಂಗ್ಲಿಷ್ ಕಲಿಬೇಕಾ? ೩ತಿಂಗಳ ಇಂಗ್ಲೀಷ್ ಸ್ಪೀಕಿಂಗ್ ಕ್ಲಾಸ್ಗೆ ಹೋದ್ರೆ ಸಾಕು?,ಕನ್ನಡವನ್ನೇ ಓದಿದರೆ ವಿದ್ವಾಂಸನಾಗ್ತಿದ್ದೆ!!, ಸಾಮಾನು ಮಾರುತಿದ್ರೆ ಈಗ ದೊಡ್ಡ ವ್ಯಾಪಾರಿ ಆಗ್ತಿದ್ದೆ !! ಅದಕ್ಕೆ ಮ್ಯಾನೇಜ್ಮೆಂಟ್ ಕಲಿಬೇಕಾ?, ಕಟ್ಟಡ ಕಟ್ಟಲು ಸಿವಿಲ್ ಇಂಜಿನಿಯರಿಂಗ್ ಮಾಡಬೇಕಾ? ಡಾಕ್ಟರ್ ಆಗಲು ಕಾಲೇಜ್ ಗೆ ಹೋಗ್ಬೇಕಾ ?
ಸುಮ್ಮನೆ ಕಾಲೇಜ್ ಹೋಗಿ ಪಾಠ ಓದುವುದಕ್ಕಿಂತ ಅವುಗಳ ಜೊತೆಗೆ ಬೆಳೆದ್ರೆ ಅಂದರೆ ವ್ಯಾಪಾರಿಯಾಗಳು ವ್ಯಾಪಾರ ಮಾಡಬೇಕು, ಮೆಕ್ಯಾನಿಕಲ್ ಇಂಜಿನಿಯರಾಗಳು ಗ್ಯಾರೇಜ್ ನಲ್ಲಿ ಕೆಲಸ ಮಾಡಬೇಕು, ಡಾಕ್ಟರ ಆಗಲು ರೋಗಿಗಳೊಂದಿಗೆ ಬದುಕ ಬೇಕು? ಗೊತ್ತಿಲ್ಲದ ವಿಷಯವನ್ನು ಇಂಗ್ಲೀಷ್ ಕೋರ್ಸಿಗೆ ಹೋಗಿರ್ತೆವಲ್ಲ ಒದ್ಲಿಕೆ ಬರುವುದರಿಂದ ಪುಸ್ತಕ ಖರೀದಿಸಿ ಓದಿದರೆ ಆಯಿತು ... ಮತ್ತೆ ಗೊತ್ತಿಲ್ಲದಿದ್ದರೆ ಗುರುವನ್ನು ಹುಡುಕಿದರೆ ಆಯಿತು. ಬರೀ ಇಂಗ್ಲೀಷ್ ಕಲಿಯಲು, ಬಾಯಿಪಾಠ ಮಾಡಲು, ಗೆಳೆಯರನ್ನು ಪಡೆಯಲು, ಡಿಗ್ರಿ ಸರ್ಟಿಫಿಕೇಟ್ಗಾಗಿ ಕಾಲೇಜ್ ಗೆ ಹೋಗ್ಬೇಕಾ ? ಶಿಕ್ಷಣ ವ್ಯವಹಾರ ಆಗಬೇಕು... ಫೀಲ್ಡ್ ಗೆ ಇಳಿಬೇಕು , ಪ್ರಾಕ್ಟಿಕಲ್ ಆಗಿರಬೇಕು...


೫. 
ಮಹಿಳೆಯರಿಗೆ ಬಾಣಂತಿ ರಜೆ ಅಂತ ಸರಕಾರ ಸರಕಾರಿ ಉದ್ಯೋಗ ಮಾಡುವವರಿಗೆ ಕೊಡ್ತಾದೆ ... ಈ ಗಂಡಸರಿಗೆ ಬಾಣಂತಿ ಹಾರೈಕೆ ಅಂತ ಯಾಕೆ ಕೊಡೋದಿಲ್ಲ !! ಅಸಮಾನತೆ ನಿಂತಿಲ್ಲ ಛೇ !!

೬. 
ಹಲವಾರು ಬಗೆಯ ಪುಸ್ತಕಗಳು ಮಾರುಕಟ್ಟೆಗೆ ಬಂದಿವೆ 
ಹೆಂಡತಿಯನ್ನು ಒಲಿಸಿಕೊಳ್ಳುವುದು ಹೇಗೆ?
ಸಂದರ್ಶನ ಎದುರಿಸುವುದು ಹೇಗೆ?
ನೆನಪಿನ ಶಕ್ತಿ ಹೆಚ್ಚಿಸುವುದು ಹೇಗೆ?
ಜೀವನದಲ್ಲಿ ಯಶಸ್ಸು ಗಳಿಸುವುದು ಹೇಗೆ?
ಪುರ್ನಜನ್ಮ , ಹಸ್ತರೇಖೆಯಿಂದ ನಿಮ್ಮಭವಿಷ್ಯ?
ಹೀಗೆ ಸಾಲು ಸಾಲು ಪುಸ್ತಕ ಬರೆಯುವವರು , ಮರ್ಲು ಕಟ್ಟಿ ಓದುವವರು, ನಮ್ಮ ಸೃಜನತ್ಮಕತೆಗೆ ಮೌಲ್ಯ ಇಲ್ವೇ? , ಸ್ವಂತಿಗೆಗೆ ಅರ್ಥ  ಇಲ್ವೇ? ಸಹಜತೆಗೆ ಬೆಲೆ ಇಲ್ವೇ?
ಮುಂದಿನ ದಿನಗಳಲ್ಲಿ ಕೋಣ ನೀರಲ್ಲಿ ಈಜುವುದು ಹೇಗೆ? ,
ನಾಯಿಗೆ ಬೊಗಳುವ ಪಾಟ..., ಕೋಳಿ ಹಾರುವುದು ಹೇಗೆ? , ಮೀನು ಮರಿ ಮಾಡುವುದು ಹೇಗೆ? ಹುಲಿ ಬೇಟೆಯಾಡುವುದು ಹೇಗೆ? ಎಂಬ ಪುಸ್ತಕಗಳು ಬರಬಹುದು ಹಾರಲು ಬರದ ಹಕ್ಕಿ, ಬೊಗಳಲು ಗೊತ್ತಿಲ್ಲದ ನಾಯಿ, ಬೇಟೆಯಾಡಲು ಗೋತ್ತಿಲ್ಲದ ಸಿಂಹಕ್ಕೂ ನಾಚಿಗೆ ....



No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...