Thursday, January 1, 2015

ನನ್ನ ಹಾಡು ...

ಹಾದಿ ಬೀದಿ ಕರೆದು ಬಳಸಿ 
ಕಾಡಿ ಬೇಡಿ ಜೀವ ಸವೆಸಿ 
ಮಾಗಿ ಹೋಗಿ ಬಾಗಿ ಬಲಿತ 
ಬದುಕ ಕಡೆದು ಪಡೆದ
ನನ್ನ ಹಾಡಿದು I I
ನಾಡಿ ಮಿಡಿತ ಕುಣಿಯಬೇಕು
ಹೂವ ಮೊಗ್ಗು ಅರಳಬೇಕು
ಬೋಳು ಮರವೂ ಚಿಗುರಬೇಕು
ಕೆಂಡ ಬೆಂಕಿ ನಂದಬೇಕು
ಬೆಂದ ಕಾಳು ಮೊಳೆಯಬೇಕು
ನೊಂದ ಮನವು ಬೆಳಗಬೇಕು
ಬಂಜೆ ಹಕ್ಕಿ ಕಾವುಕೊಡಬೇಕು
ಮರೆತ ಸ್ಮೃತಿಗೆ
ನೆನಪ ಬರಿಸಿ
ನಾನು ನೀನು ಬೇದ ಮರೆತು
ಬಾನು ಪೃಥ್ವಿ ಹಿಗ್ಗಬೇಕು
ನನ್ನ ಹಾಡ ಕೇಳಿ
ಜಗವೇ ನಗಬೇಕು ...

No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...