೧. ಗೊಮ್ಮಟ.
ಅವರಿಬ್ಬರ
ಅಲ್ಪದ ದೀಕ್ಷೆಗೆ
ಹರಿಯಿತು ಅಣ್ಣ - ತಮ್ಮನ
ಅಕ್ಕರೆಯ ಪೊರೆ,
ಅರಿಯದೆ
ಬೆರೆತು
ಭರತನಾದರೆ ,
ಮಾನಕಷಾಯ ಬಿಟ್ಟು
ಬೆಟ್ಟದ ಮೇಲಿನ
ಏಕಶಿಲೆಗೆ
ಬಾಹುಬಲಿಯಾದ ..
೨. ಅಕ್ಷರ...
ಕನ್ನಡವ ಟಂಕಿಸಿದರೆ
ಅದು
ಮುದ್ದು ಮುದ್ದು
ಗುಂಡಗೆ - ದುಂಡಗೆ
ಲಡ್ಡು ಉಂಡೆಯಂತೆ.
ಅದೇ ನಾನು ಬರೆದರೆ
ಸತ್ಯನಾರಾಯಣ ಪೂಜೆಯ
ಮುದ್ದೆಯಂತೆ... !!
೩. ವಿರಹ..!!
ಸೂರ್ಯನಾರಾಯಣನಿಗೆ
ಕುಟುಂಬ ಕಲಹ
ಸತಿ
ವಿಚ್ಛೇದನದಿಂದ
ಚಿಂತೆಯ ಸಂತೆಯಲ್ಲಿ
ಏಕಾಂಗಿ ರವಿ
ತಲೆ
ಬೋಳಿಸಿ
ಸಿಟ್ಟಿನಿಂದ
ಕೆಂಪಗೆ
ಮಿನುಗುತಿದ್ದಾನೆ... !
೪. ನಿದಿರೆ.
ಬೆಳದಿಂಗಳ ಜಳಕಕ್ಕೆ
ಬಾನಿನ ಬಣಲೆಯೊಡಲಿನ
ಅಲಿಂಗನದ ಹುಚ್ಚು
ಬಾಹುವಿನ ಸೆರೆಯಲ್ಲಿ ಕಂಬಳಿಯ
ಸ್ಪರ್ಶ
ಮತ್ತೆ ಮತ್ತೆ ತೆಕ್ಕೆಯ
ಬಗಲಿಗೆ ಜಾರುವ ಆಸೆ
ದೇಹಕ್ಕೆ ತನ್ನ
ಮನದನ್ನೆಯ ಮೈಮರೆವು
ಮದಿರೆಯ ಚುಂಬನದಲ್ಲಿ
ಬಿಡವು
ಈ ನಿದ್ರೆ...
೫. ಮಕ್ಕಳು
ಬಿಂಬದ
ಮೇಲೆ ಬಿಂಬ
ಬಳಸಿ,
ಹಣ್ಣಾದ
ಮೇಲೆ
ಕಣ್ಣು
ಕೊಟ್ಟು,
ಉೂರುಗೋಲಿಗೆ
ಅಧಾರವಾಗಿ
ಮಜ್ಜೆರಸ
ತುಂಬುವವರೆ
ಮಕ್ಕಳು..
೬. ಸಾಹಿತಿ,
ಸಾಹಿತಿ
ಅಂಗೈ ಅಗಲದ
ತಾಮ್ರದ
ಫಲಕಕ್ಕೆ
ಕೈ
ಒಡ್ಡುವುದಿಲ್ಲ....
ಮೊಂಡಾದ
ಸ್ಮೃತಿಗೆ
ಚಿಂತನೆಯ
ಒಡ್ಡು
ಕಟ್ಟುವುದು..
೭. ಓಜೋನ್
ನೇಸರ
ಕಣ್ಣು ಹೊಡೆದು
ಮನ
ನೋಯಿಸುವುದು
ಬೇಡವೆಂದು
ಸುಂದರಿ
ಧರಿತ್ರಿ
ಬು
ಧರಿಸಿ
ತಿರುಗುತ್ತಿದ್ದಾಳೆ..
೮ ಕಾಮದ ಫಲ
ಅಪ್ಪ
ಅಮ್ಮನ
ಕಾಮದ ತೃಷೆಯ
ಫಲಗಳೇ
ನಾವು
ನೀವು .. !!
೯.ಹಗ್ಗ ಜಗ್ಗಾಟ
ನಮ್ಮಿಬ್ಬರ
ಕಣ್ಣಿನ ಮಂಟಪದಲ್ಲಿ
ಹಗ್ಗ ಜಗ್ಗಾಟದ
ನರ್ತನ ,
ಗೆದ್ದಾವ ನಾನೇ
ಇಟ್ಟ
ನೋಟ
ಹಿಂದಕೆಳೆಯಲೇ
ಇಲ್ಲ...
ಅವಳು
ನಾಚಿತಲೆ ತಗ್ಗಿಸಿ
ಸಮ್ಮತಿಸಿದಂತಿತ್ತು ...
No comments:
Post a Comment