Thursday, January 1, 2015

ಹನಿ

೧. ಪ್ರೀತಿಗೆ ಅರ್ಥ !!
ಸೌಂದರ್ಯ
ಸುಕ್ಕು
ಕಟ್ಟಿದ
ಮೇಲೂ
ಅಕ್ಕರೆಯಿಂದ
ಮುತ್ತಿಟ್ಟು
ನಕ್ಕರೆ
ಅದೇ
ಒಲವಿನ ಸಕ್ಕರೆ.


೨. ಒಪ್ಪಿಗೆ.!


ನನ್ನವಳ
ಜುಮುಕಿ
ಕುಣಿಯುತ್ತಿತ್ತು
ನನ್ನ ಹೆಜ್ಜೆಯ
ಹಚ್ಚೆ
ಹೃದಯ
ತಮಟೆಗೆ
ತಟ್ಟಿ
ನನ್ನನ್ನೇ
ಅನುಮೋದಿಸಿದಂತೆ!!


೩. ಮೆಲ್ವಿಚಾರಣೆ

ಚುಕ್ಕಿ
ಮಕ್ಕಳೆಲ್ಲ
ಜೀವನದ
ಆಟದಲ್ಲಿ
ಜಯಿಸಲು
ಮಿನುಗಿ
ಬೆಳಗಿ
ಓದುತ್ತಾರೋ..
ಎಂದು
ಚಂದ್ರನದೊಂದು
ಕಾಂತಿಯ
ಸುತ್ತು.....


೪. ಸೆಳೆತ.
ಅರಿವಿಲ್ಲದೇ
ಶುರುವಾದ
ಅವಳ
ಸೆಳಹು,
ಕಳವಾಯಿತು
ಮನ ,
ಬೆಳಗ ಬರುವವಳ
ನೆನೆದು,
ಮೊಗದಲೊಂದು
ಮಂದಸ್ಮಿತ
ಮಿಂಚಿ
ಬರುತ್ತಿದೆ......


೫. ತಿಂಗಳ ರಜೆ ..!
ಶಶಿಯನ್ನು ,
ನಲ್ಲ ಒಮ್ಮೆಯು
ಮುಟ್ಟಿಯೇ ಇಲ್ಲ,
ಪಕ್ಷದಲ್ಲೊಮ್ಮೆ
ಋತುಚಕ್ರ
ನಿಂತಿಲ್ಲ,
ಕಾಲ ಮರಳಿದರೂ
ಗರ್ಭ ಕಟ್ಟಿಲ್ಲ...
ಅವಳಿನ್ನೂ ಕನ್ಯೆ
ಸನ್ನೆಯಿಂದಲೇ
ಕರೆಯುವಳು
ಇದು
ಆಮಾವಾಸ್ಯೆ
ಹುಣ್ಣಿಮೆಯೆಂದು.....!!


೬. ಮುತ್ತು ?

ಕೆಸುವಿನೆಲೆಗಳೆಡೆಯಲ್ಲಿ
ನರ್ತಿಸುವ
ಹನಿ...
ಅವಳ
ಕತ್ತಲ್ಲಿ
ಕುಣಿಯುವ
ಮಣಿ
ಸರಗಳೆರಡು
ಪೋಣಿಸುವುದು
ಮತ್ತೆರದ
ಮುತ್ತನ್ನೇ ...!!!


೭. ಹೊಟ್ಟೆ ..!!

ಸೊಪ್ಪು ತರಕಾರಿಗಳನ್ನು
ಕೊಚ್ಚಿ
ಕಡಿದು
ಮಾಡುವುದು
ಗೊಬ್ಬರ ...
ಸತ್ತ
ಪ್ರಾಣಿ ಪಕ್ಷಿಗಳ
ಕಳೇಬರ
ಶೇಕರಿಸುವುದು
ಶವಗಾರ
ಅದೇ ನಮ್ಮ
ಉದರ ...!!??


೮. ಅಕ್ಷ(ಕ್ಷಾ)ರ

ಅಕ್ಷರ
ಕ್ಷಾರವಾಗಿ
ಬಿತ್ತಿದರೆ
ಮನ
ಕಲಕಿಸುತದೆ
ಕುಲುಕಿಸುತದೆ
ಕುದಿಸುತದೆ ....


೯. ಭ್ರಮೆ ...
ಪತ್ರೆಗಳ
ಎಡೆಯಲ್ಲಿ
ನುಸುಳುವ
ಸುಳಿ ಗಾಳಿಯನ್ನೇ
ಕೃಷ್ಣನ
ಕೊಳಲ ದನಿಯೆಂದು
ಕಾಯುತಿದ್ದ
ರಾಧೆಯಂತೆ
ನಾನು
ಅಮ್ಮನ
ಕಾಜಿಯ
ಕಿಣಿ ಕಿಣಿ ಶಬ್ದವೇ
ಅವಳ
ಲಜ್ಜೆಯ
ಹೆಜ್ಜೆಯಾ
ಗೆಜ್ಜೆಯ
ಸದ್ದೆಂದು
ಭ್ರಮಿಸುತಿದ್ದೇನೆ...


೧೦. ಕಂಬಳಿ ...

ಮಾಗಿಯ
ನಡುಗುವ
ಚಳಿಯಲ್ಲೂ
ನಿನ್ನ
ನೆನಪುಗಳೇ
ಬೆಚ್ಚನೆಯ
ಕಂಬಳಿ ..!!

No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...