1. ಚಂದ್ರ...!
೦೦೦೦೦೦
ಬಣಲೆಯಲ್ಲಿ
ಹಪ್ಪಳ ಕರಿಯುತ್ತಿದ್ದಾರೆ
ರಾತ್ರಿಯ ಭೋಜನಕ್ಕೆಂದು
ಚಂದ್ರ ಕೆಂಪೇರಲೇ
ಇಲ್ಲ
ರವಿ
ನಿದ್ದೆಗೆಟ್ಟು
ಮುಂಜಾನೆ
ಹಸಿಯಾಗಿ ತಿಂದು
ಬಿಟ್ಟ...!!
2. ಅಸಮಾನತೆ..!
೦೦೦೦೦೦೦೦
ರವಿ
ಗೋಲಕ್ಕೆ
ಬೆಳಕ
ಯಜಮಾನನಾದ್ರೂ
ಪ್ರೀತಿಸಿ ಆರೈಸುವವರು
ಕಮ್ಮಿ,
ಅದೇ ಭೂಮಿಕಾಳನ್ನು
ಹಾಡಿ ಹೊಗಳುವವರೇ ಹೆಚ್ಚು,
ಕಾರಣ
ಅವಳು
ಹೆಣ್ಣು..!!
3.ಗ್ರಹಣ.
0000
ರವಿಯ
ದಾಂಪತ್ಯ
ಕಲಹದ
ಕುರುಹುವಾಗಿ
ಮೊಗದ
ಬಾವು
ಹೆಪ್ಪುಗಟ್ಟಿದ ರಕ್ತದ
ನೋವು.
4.ದೃಷಿ್ಟ ಬೊಟ್ಟು.
೦೦೦೦೦೦೦೦೦
ನನ್ನವಳ ಸೌಂದರ್ಯಕ್ಕೆ
ದೃಷ್ಟಿ ತಾಕುವುದು
ಬೇಡವೆಂದು
ಅವಳು
ಮುಡಿದ
ಜಡೆಯೊಳಗೆ,
ಹಿಮಮಣಿಗೆ ಕಾದ
ಗುಲಾಬಿ ಪಕಳೆಗಳಲ್ಲಿ
ಗುಂಡಗಿನ ಬೊಟ್ಟು ಇಟ್ಟಿದ್ದಾನೆ
ಈ ರವಿ.
5. ಗುಡುಗು - ಸಿಡಿಲು...!
೦೦೦೦೦೦೦೦೦
ಶಿಕಾರಿಗೆ ಹೊರಟ
ಮಳೆರಾಯ
ತೋಟೆಯಿಟ್ಟು
ಬೇಟೆಯಾಡಿದ
ನೀಲಾ ಬಾನಿನೊಡಲ
ಸೀಳಿ ಸೀಳುತ್ತಾ
ಕರಿ ಮೇಘಗಳ
ರುಚಿಯ
ಸವಿಯಲು....
6. ಸಂಧ್ಯಾ ಜ್ಯೋತಿ.
೦೦೦೦೦೦೦೦೦
ಬೆಳಕ ಮೊಗ್ಗು
ಅರಳುತ್ತಿದೆ...
ರವಿಯಿಲ್ಲವೆಂಬ
ನೆವನಾದಲ್ಲಾದರೂ
ಶಶಿಯನ್ನು
ಹೊಸ್ತಿಲ
ಹೊರಗೆ
ನಿಲ್ಲಿಸಿ
ಮುದುಡಿಸಿ ಬಿಡಬೇಕೆಂಬ
ಹಠದಿಂದ...!!
7. ದೀಪೋತ್ಸವ.
ನೇಸರ ದೀಪ ಸ್ಥಂಭ
ಚಂದಿರ ದೀಪ ಬಿಂಬ
ಬಾನಿನಲ್ಲಿ
ರಾತ್ರಿ ಹಣತೆಗಳ
ಲಕ್ಷದೀಪೋತ್ಸವ
ನಿತ್ಯ ಕಾರ್ತಿಕೋತ್ಸವ.
8. ಮಾಗಿಯ ಮಂಜು.
೦೦೦೦೦೦೦೦೦
ನವವಧು ಸಿಂಗಾರಿ
ಭೂಮಿಕಾಳ
ಸೌಂದರ್ಯವ
ಹಸಿರ ಸೀರೆಯಲ್ಲಿ
ಮುಂಜಾವ
ರವಿರಾಜ
ನೋಡಬಾರದೆಂದು
ಮಂಜುಳಳಿಂದ
ಹಿಡಿದ
ಅಂತಃಪಟಲ.
9.ಅಮಾವಾಸ್ಯೆ
೦೦೦೦೦೦೦
ಶಶಿಯನ್ನು
ಕದ್ದು
ಅರೆದು
ಮಾರುತ್ತಿದ್ದಾಳೆ
ನಮ್ಮ ರಾಧಾಮ್ಮ
ಅವಳ
ಹಾಲಿನ
ದುಂಡಗಿನ
ಬಟ್ಟಲೊಳಗೆ
ಕರಗಿ
ನೀರಾದದನ್ನು
ನಾ
ಕಂಡೆ...!
೧. ರವಿಗೂ ಉಪವಾಸ ಅಮಾವಾಸ್ಯೆಯ ದಿನ!
ReplyDelete೨. ಹಣ್ಮಕ್ಳಿಗಿರೋ TRP ಹೈಕುಳಿಗೆ ಎಲ್ಲೈತೆ ಸಾಮಿ?
೩. ಗ್ರಹಣ ಬಿಟ್ಟೊಡೆ ಮತ್ತೆ ಪರಿಣಯ, ಮಂಗಮಾಯವು ನೋವು.
೪. ಕ್ಯಾ ಬಾತ್ ಹೈ...
೫. ಅವನಿಗೆ ರುಚಿ ಅದೇ ನಮಗೆ ಜೀವ ಜಲ.
೬. ದಿನವೂ ಗೆಲ್ಲುತ್ತದು ಹಠದಲ್ಲಿ.
೭. 5* ultimate...
೮. ಒಳ್ಳೆಯ ರಸವತ್ತಾದ ಕಲ್ಪನೆ.
೯. ಹಾಲು ಕೆನೆಗಟ್ಟಿ ನಾಳೆಗೆ ತುಸುವೇ ಚಂದ್ರಾಗಮನ.